ಆಲಿವ್ ಬೋರ್ಡ್ ಕರ್ನಾಟಕ ಪಿಡಬ್ಲ್ಯುಡಿ ಟೆಸ್ಟ್ ಸರಣಿ ಇಂದ ಪರೀಕ್ಷೆ ತಯಾರಿ ಆಗಲಿದೆ ಎಂದಿಗಿಂತಲೂ ಸುಲಭ
ಪಿಡಬ್ಲ್ಯುಡಿ ಪರೀಕ್ಷೆ ದಿನಾಂಕ ನಿಗದಿಯಾಗಿದ್ದು, ನೀವೆಲ್ಲಾ ಸಾಕಷ್ಟು ತಯಾರಿಯನ್ನೂ ಸಹ ನಡೆಸುತ್ತಿದಿರಿ. ಇದಕ್ಕಾಗಿ ಆಲಿವ್ ಬೋರ್ಡ್ ನಿಮಗೆ ಸಹಾಯ ಮಾಡಲಿದೆ. ನಿಮ್ಮ ಆತ್ಮವಿಶ್ವಾಸ ಹೆಚ್ಚಿಸಲು ನಿಮಗೆ ಅತ್ಯುತ್ತಮ ತಯಾರಿ ನೀಡಲಿದೆ. ಮುಖ್ಯ ಪರೀಕ್ಷೆ ಬರೆಯುವ ಮುನ್ನ ಅಣಕು ಪರೀಕ್ಷೆ ಬರೆದರೆ ಒಂದಷ್ಟು ಆತ್ಮವಿಶ್ವಾಸ ಹೆಚ್ಚಾಗುವುದು ಖಂಡಿತ.ಈ ನಿಟ್ಟಿನಲ್ಲಿ ಮುಖ್ಯ ಪರೀಕ್ಷೆಯ ಮೊದಲೇ ಆಲಿವ್ ಬೋರ್ಡ್ ಕರ್ನಾಟಕ ಪಿಡಬ್ಲ್ಯುಡಿ ಟೆಸ್ಟ್ ಸರಣಿ ಅನ್ನು ಶೀಘ್ರವಾಗಿ ಆರಂಭಿಸಲಿದೆ.
ಯಾಕೆ ಈ ಟೆಸ್ಟ್ ಸರಣಿ?
ನಾವು ಒಂದು ಪರೀಕ್ಷೆಗೆ ಎಷ್ಟೇ ತಯಾರಿ ನಡೆಸಿದರೂ ನಮ್ಮಲ್ಲಿ ಕೊಂಚ ಭಯ, ಅನುಮಾನ ಎಲ್ಲವೂ ಮೂಡುವುದು ಸಹಜ. ಈ ಅನುಮಾನ ಹೊಡೆದೋಡಿಸಿ ನಿಮ್ಮ ಆತ್ಮವಿಶ್ವಾಸ ಹೆಚ್ಚಿಸಲು ಈ ಟೆಸ್ಟ್ ಸರಣಿ ನಿಮಗೆ ಸಹಾಯ ಮಾಡಲಿದೆ. ಮುಖ್ಯ ಪರೀಕ್ಷೆಯಂತೆಯೇ ಈ ಟೆಸ್ಟ್ ಸರಣಿಯೂ ಇರಲಿದ್ದು ನಿಮಗೆ ನಿಮ್ಮ ತಯಾರಿಯ ಮಟ್ಟವನ್ನು ತಿಳಿಸಿಕೊಡುತ್ತದೆ.
ಈ ಕರ್ನಾಟಕ ಪಿಡಬ್ಲ್ಯುಡಿ ಟೆಸ್ಟ್ ಸರಣಿ ಅಲ್ಲಿ ಏನೆಲ್ಲಾ ಇರಲಿದೆ?
ಇನ್ನೂ ಈ ಟೆಸ್ಟ್ ಸರಣಿಯಲ್ಲಿ ೧೫ ಪರೀಕ್ಷಾ ಪೇಪರ್ಗಳು ಇರಲಿವೆ.
೧. ೫ ಸಮಾನ್ಯ ಜ್ಞಾನ ಪರೀಕ್ಷಾ ಪೇಪರ್ಗಳು (ಡಿಪ್ಲೋಮ ಮತ್ತು ಡಿಗ್ರಿ ಹಂತ)
೨. ೫ ಜೂನಿಯರ್/ಕಿರಿಯ ಇಂಜಿನಿಯರ್ ಪರೀಕ್ಷಾ ಪೇಪರ್
೩. ೫ ಸಹಾಯಕ ಇಂಜಿನಿಯರ್ ಪರೀಕ್ಷಾ ಪೇಪರ್
೪. ತಾಂತ್ರಿಕ ಪರೀಕ್ಷಾ ಪೇಪರ್ಗಳು ಇರಲಿವೆ
ಇನ್ನೂ ಹಿಂದಿನ ೧೦-೧೫ ವರ್ಷಗಳ ಪರೀಕ್ಷಾ ಪತ್ರಿಕೆಗಳು ಸಹ ಲಭ್ಯವಿದ್ದು, ಇದರಿಂದ ಒಂದು ಅಣಕು ಪರೀಕ್ಷೆಯನ್ನು ನಡೆಸಲಾಗುತ್ತದೆ.
ಪರೀಕ್ಷಾ ಶುಲ್ಕ ಮತ್ತು ಇತರೆ ವಿವರಗಳು
ಇನ್ನು ಈ ಎಲ್ಲಾ ಟೆಸ್ಟ್ ಸರಣಿ, ಅಣಕು ಪರೀಕ್ಷೆ, ಇತರೆ ಪಠ್ಯಗಳಿಗೆ ಪ್ರವೇಶ ಪಡೆಯಲು ನೀವು ರೂ.೨೫೦೦ ಅನ್ನು ಪಾವತಿಸಿಬೇಕು. ಒಮ್ಮೆ ಈ ಮೊತ್ತವನ್ನು ಪಾವತಿಸಿದ್ದಲ್ಲಿ ನೀವು ಈ ಪರೀಕ್ಷೆಗಳನ್ನು ಬರೆಯಲು ಅನಿಯಮಿತ ಪ್ರವೇಶವನ್ನು ಪಡೆಯುತ್ತೀರಿ. ಎಷ್ಟು ಬಾರಿಯಾದರೂ, ಯಾವಾಗ ಬೇಕಾದರೂ ನಿಮ್ಮ ಅನುಕೂಲಕ್ಕೆ ತಕ್ಕ ಹಾಗೆ ಮನೆಯಲ್ಲೇ ಕುಳಿತು ಈ ಪರೀಕ್ಷೆಗಳನ್ನು ತೆಗೆದುಕೊಳ್ಳಬಹುದು.
ಅಷ್ಟು ಮಾತ್ರವಲ್ಲ ನೀವು ಪಾವತಿಸುವ ಹಣ ಕೇವಲ ಪಿಡಬ್ಲ್ಯುಡಿ ಪರೀಕ್ಷೆ ಸರಣಿಗೆ ಮಾತ್ರವಲ್ಲದೆ ಪಿಎಸ್ಐ, ಕೆಯೆಎಸ್, ಎಫ್ಡಿಸಿ, ಎಸ್ಡಿಸಿ, ಪಿಡಿಓ ಹಾಗೂ ಇನ್ನಿತರೆ ಸರಕಾರಿ ಪರೀಕ್ಷೆಗಳ ಟೆಸ್ಟ್ ಸರಣಿ, ಅಣಕು ಪತ್ರಿಕೆಗಳನ್ನೂ ಸಹ ಪಡೆಯಬಹುದು. ಇದರ ಜೊತೆಗೆ ಪರೀಕ್ಷಾ ವೇಳಾಪಟ್ಟಿ ಸಹ ನಿಮಗೆ ದೊರೆಯಲಿದೆ.
ಹಾಗಾದರೆ ಇನ್ನೇಕೆ ತಡ. ಈಗಲೇ ಆಲಿವ್ ಬೋರ್ಡ್ಗೆ ಲಾಗಿನ್ ಆಗಿ, ಶುಲ್ಕ ಪಾವತಿಸಿ ಪರೀಕ್ಷಾ ತಯಾರಿಯನ್ನು ಮುಂದುವರಿಸಿ.
ಆಲಿವ್ ಬೋರ್ಡ್ ವತಿಯಿಂದ ನಿಮಗೆ ಆಲ್ ದಿ ಬೆಸ್ಟ್