Coding ಮತ್ತು Decoding ಮನೊಸಾಮರ್ಥ್ಯದ ಭಾಗದಲ್ಲಿನ ಕೆಲವು ಸಂಕೀರ್ಣ ವಿಷಯಗಳಾಗಿವೆ. ಈ ವಿಭಾಗವು ನೇಮಕಾತಿ ಪ್ರಕ್ರಿಯೆಗಳು ಮತ್ತು ಉನ್ನತ ಶಿಕ್ಷಣಕ್ಕಾಗಿ ಮೀಸಲಿಟ್ಟ ಎಲ್ಲಾ ಪ್ರಮುಖ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಒಳಗೊಂಡಿರುವ ಅತ್ಯಂತ ಸಾಮಾನ್ಯ ವಿಭಾಗಗಳಲ್ಲಿ ಒಂದಾಗಿದೆ. ಅನೇಕ ಅಭ್ಯರ್ಥಿಗಳು Coding-Decoding ಪ್ರಶ್ನೆಗಳನ್ನು ಪರಿಹರಿಸಲು ಸವಾಲಾಗಿ ಕಾಣುತ್ತಾರೆ ಮತ್ತು ಪರಿಣಾಮವಾಗಿ, ಅವರು ಈ ಸ್ಕೋರಿಂಗ್ ಪ್ರಶ್ನೆಗಳನ್ನು ಪ್ರಯತ್ನಿಸುವುದನ್ನು ತಪ್ಪಿಸುತ್ತಾರೆ ಮತ್ತು ಕೆಲವು ಸುಲಭ ಮತ್ತು ತ್ವರಿತ ಅಂಕಗಳನ್ನು ಕಳೆದುಕೊಳ್ಳುತ್ತಾರೆ. ಹಾಗಾಗಿ ಓಲಿವ್‌ಬೋರ್ಡ್‌ನ ಈ ಬ್ಲಾಗ್‌ನಲ್ಲಿ ನೀವು ಈ ವಿಷಯ ಸಂಬಂಧಿತ ಮಾಹಿತಿಯನ್ನು ಪಡೆಯಲಿದ್ದೀರಿ ಮತ್ತು ಈ ರೀತಿಯ ಇನ್ನಷ್ಟು ಹಲವು ಮನೊಸಾಮರ್ಥ್ಯದ ವಿಷಯಗಳ e-book ಅನ್ನು ನೀವು ನಮ್ಮ ವೆಬ್‌ಸೈಟ್‌ನಲ್ಲಿ ಉಚಿತವಾಗಿ ಡೌನ್‌ಲೋಡ್ ಮಾಡಬಹುದು.
CODING AND DECODING
ನಿರ್ದಿಷ್ಟ ನಿಯಮಗಳು ಮತ್ತು ನಿಬಂಧನೆಗಳನ್ನು ಬಳಸಿಕೊಂಡು ನಿರ್ದಿಷ್ಟ ಮಾದರಿಗಳಲ್ಲಿ ಅಥವಾ code ಗಳಲ್ಲಿ ಪದಗಳನ್ನು, ಸಂಖ್ಯೆಗಳನ್ನು ಗುಪ್ತ ಅಥವಾ ಗೂಢಾಲಿಪಿಯನ್ನಾಗಿ(Encryption) ಮಾಡುವುದಕ್ಕೆ coding ಎನ್ನುತ್ತಾರೆ. ಒಂದು coded ಮಾಹಿತಿಯು ಸುಲಭವಾಗಿ ಯಾರಿಗೂ ಅರ್ಥವಾಗದ ರೀತಿ ರಚಿಸಲಾಗುತ್ತದೆ. ಈ ರೀತಿ ಮಾಹಿತಿಯನ್ನು ಅನೇಕ ವಿಧಗಳಲ್ಲಿ ಕೋಡ್ ಅಥವಾ ಎನ್‌ಕ್ರಿಪ್ಟ್ ಮಾಡಬಹುದು. ಕೆಲವು ವಿಧಗಳು ಇಲ್ಲಿ ನೀಡಲಾಗಿದೆ.
Decoding ಎನ್ನುವುದು ನಿರ್ದಿಷ್ಟ ರೂಪಗಳಿಂದ ಮಾದರಿಗಳನ್ನು ಮೂಲ ರೂಪಗಳಿಗೆ ಡೀಕ್ರಿಪ್ಟ್ ಮಾಡಲು ಬಳಸುವ ಪ್ರಕ್ರಿಯೆಯಾಗಿದೆ.
LETTER CODING
ನೀವು ಓಲಿವ್‌ಬೋರ್ಡ್‌ನ ಅಕ್ಷರ ಸರಣಿ e-book ಓದಿದ್ದಲ್ಲಿ ನಿಮಗೆ ಇದು ಸುಲಭವಾಗಲಿದೆ. ಈ e-book ಅನ್ನು ನೀವು ಉಚಿತವಾಗಿ ಡೌನ್‌ಲೋಡ್ ಮಾಡಬಹುದು. ಈಗ ಈ coding ಅನ್ನು ತಿಳಿಯುವ ಮೊದಲು ಒಂದು ಕೋಷ್ಟಕವನ್ನು ನೋಡೋಣ.
A 01 | B 02 | C 03 | D 04 | E 05 | F 06 | G 07 | H 08 | I 09 | J 10 | K 11 | L 12 | M 13 |
N 14 | O 15 | P 16 | Q 17 | R 18 | S 19 | T 20 | U 21 | V 22 | W 23 | X 24 | Y 25 | Z 26 |
ಈ ಕೋಷ್ಟಕದಲ್ಲಿ ಹೇಳಿದಂತೆ ಅಕ್ಷರಗಳನ್ನು ಅವುಗಳ ಅನುಕ್ರಮ ಸಂಖ್ಯೆಯೊಂದಿಗೆ ನೀಡಲಾಗಿದೆ.
ಇಲ್ಲಿ ಅಕ್ಷರಗಳು ಕೇವಲ ಅಕ್ಷರಗಳಲ್ಲದೆ ಬೇರೆ ಯಾವುದಾದರೊಂದು ಮಾದರಿಯನ್ನು ಅನುಸರಿಸುತ್ತಿರುತ್ತವೆ. ಅದನ್ನು ಅರಿತು ಅಭ್ಯರ್ಥಿಯು ಕೊಟ್ಟಿರುವ ಅಕ್ಷರದ ಮಾದರಿಯನ್ನು ಛೇದಿಸಿ decode ಮಾಡಬೇಕು.
ಉದಾಹರಣೆಯೊಂದಿಗೆ ನಾವು ಇದನ್ನು ನೋಡೋಣ. ಪ್ರಶ್ನೆಗಳಲ್ಲಿ ಒಂದು ಪದವನ್ನು ಕೊಟ್ಟು ಅದರ ಮೂಲಕ ಬೇರೆ code ಅನ್ನು ರಚಿಸಿ ಎಂದು ಕೇಳಬಹುದು.
ಉದಾ-
BELONGINGS ಎಂಬ ಪದವು TABLESTESF ಎಂದು code ಆಗಿದ್ದರೆ. LINEN ಎಂಬುದನ್ನು Code ಅಲ್ಲಿ ನೀವು ಹೇಗೆ ಬರೆಯಲಿದ್ದೀರಿ?
ಅ) BETEAE ಬ) BTAEA ಕ) BATEA ಡ) ಮೇಲಿನ ಯಾವುದು ಅಲ್ಲ
ಪರಿಹಾರ- ಪ್ರಶ್ನೆಯಲ್ಲಿ ಕೊಟ್ಟ ಮಾದರಿಯಂತೆ
Letters | B | E | L | O | N | G | I | N | G | S |
Codes | T | A | B | L | E | S | T | E | S | F |
ಈ ಕೊಷ್ಟಕದಂತೆ ಈಗ LINEN ಅನುಗುಣವಾಗಿ L – B, I – T, N – E, E – A, N – E = BTEAE
ಉತ್ತರ – ಅ) BTEAE
ನಿರ್ದಿಷ್ಟ ಮಾದರಿಯ ಉದಾಹರಣೆ
ಈ ಭಾಗದಲ್ಲಿ ಕೊಟ್ಟಿರುವ ಮಾದರಿಯನ್ನು ಸರಿಯಾಗಿ ಗಮನಿಸಿ ಉತ್ತರಿಸಲು ಮುಂದಾಗಬೇಕು
ಉದಾ- POSTED ಎಂಬುದು DETSOP ಎಂದಾಗಿ code ಆಗಿದ್ದರೆ, SPEED ಅನ್ನು ಹೇಗೆ code ಮಾಡುವಿರಿ?
ಅ) DEEPS ಬ) DEESP ಕ) DESEP ಡ)SPEDE
ಪರಿಹಾರ- ನೀವು ಈಗ ಪ್ರಶ್ನೆಯನ್ನು ಸರಿಯಾಗಿ ಗಮನಿಸಿ, ಕೊಟ್ಟಿರುವ ಮಾದರಿಯ ಪದವನ್ನು ತಿರುಚಿ ಬರೆಯಲಾಗಿದೆ. ಅಂದರೆ ಹಿಮ್ಮುಖವಾಗಿ ಬರೆಯಲಾಗಿದೆ. POSTED – DETSOP, ಈಗ SPEED – DEEPS
ಉತ್ತರ – ಅ) DEEPS
ಉದಾ- GREET ಎಂಬುದು FQDDS ಎಂದಾಗಿ code ಆಗಿದ್ದರೆ, CDDO ಅನ್ನು ಹೇಗೆ code ಮಾಡುವಿರಿ?
ಅ) EDDP ಬ) DEEP ಕ) PEED ಡ) EPED
ಪರಿಹಾರ –
Word | G | R | E | E | T |
Code | F | Q | D | D | S |
ಈ ಕೋಷ್ಟಕವನ್ನು ನೋಡಿ, ಕೊಟ್ಟಿರುವ ಪದದಲ್ಲಿನ ಪ್ರತೀ ಅಕ್ಷರದ ಹಿಂದಿನ ಅಕ್ಷರವನ್ನು ಬಳಸಿ code ಮಾಡಲಾಗಿದೆ. ಹಾಗಾಗಿ CDDO ಈ ಪದದಲ್ಲಿನ ಪ್ರತೀ ಅಕ್ಷರದ ಹಿಂದಿನ ಅಕ್ಷರಗಳನ್ನು ಬಳಸಿ ಉತ್ತರಿಸಬೇಕು. ಇಲ್ಲಿ CDDO ಇದೇ ಒಂದು code ಅಗಿದೆ. ಹಾಗಾಗಿ ಇದರ ಪದವನ್ನು ನಾವು ಕಂಡುಹಿಡಿಯಬೇಕು. ಅದಕ್ಕಾಗಿ ಈ ಅಕ್ಷರಗಳ ಮುಂದಿನ ಅಕ್ಷರಗಳನ್ನು ಕೂಡಿಸಿ ಆ ಪದವನ್ನು ನೋಡೋಣ. C – D, D – E, D – E, O – P = DEEP
ಉತ್ತರ- ಬ) DEEP
ಉದಾ- PAT ಎಂಬುದು QRBCUV ಎಂದಾಗಿ code ಆಗಿದ್ದರೆ, GRACE ಅನ್ನು ಹೇಗೆ code ಮಾಡುವಿರಿ?
ಅ) HISTBCDEFG ಬ) HISTBCDEGF ಕ) HISBTCDEFG ಡ) HISTBCEDFG
ಪರಿಹಾರ- ನೀವು ಈಗ ಪ್ರಶ್ನೆಯನ್ನು ಸರಿಯಾಗಿ ಗಮನಿಸಿ, ಕೊಟ್ಟಿರುವ ಮಾದರಿಯ ಪದದ ಅಕ್ಷರದ ನಂತರದ ಎರಡು ಅಕ್ಷರವನ್ನು code ಪದದಲ್ಲಿ ಬಳಸಲಾಗಿದೆ. P – QR, A – BC, T – UV = QRBCUV ಹಾಗಾಗಿ G- HI, R – ST, A – BC, C – DE, E – FG = HISTBCDEFG
ಉತ್ತರ – ಅ) HISTBCDEFG
ಉದಾ- EGHJKMKM , FILL ಎಂಬುದರ code ಆಗಿದ್ದರೆ, EGDFDFKM ಅನ್ನು ಹೇಗೆ decode ಮಾಡುವಿರಿ?
ಅ) LEEF ಬ) FEEL ಕ) DEAL ಡ) REEL
ಪರಿಹಾರ- ಪ್ರಶ್ನೆಯನ್ನು ಸರಿಯಾಗಿ ಗಮನಿಸಿ, ಕೊಟ್ಟಿರುವ ಮಾದರಿಯ code ಅಲ್ಲಿ ಎರಡು ಅಕ್ಷರಗಳ ನಡುವಿನ ಅಕ್ಷರವು ಪದದಲ್ಲಿ ಇದೆ. EG ನಡುವೆ F, HJ ನಡುವೆ I, KM ನಡುವೆ L, KM ನಡುವೆ L= FILL. ಅದೇ ರೀತಿ, EG ನಡುವೆ F, DF ನಡುವೆ E, DF ನಡುವೆ E, KM ನಡುವೆ L = FEEL
ಉತ್ತರ – ಬ) FEEL
NUMBER CODING
ಇಲ್ಲಿ ಸಂಖ್ಯೆಗಳನ್ನು ಬಳಸಲಾಗುವುದು. ಎಲ್ಲಾ ಸಮಯದಲ್ಲೂ ಅಕ್ಷರಗಳ ಅನುಕ್ರಮ ಸಂಖ್ಯೆಯೆ ಆಗಿರುವುದಿಲ್ಲ. ಒಂದು ನಿರ್ದಿಷ್ಟ ಮಾದರಿಯನ್ನು ಈ ಪ್ರಶ್ನೆಗಳು ಅನುಸರಿಸುತ್ತವೆ. ಪ್ರಶ್ನೆಯಲ್ಲಿ ನೀಡಲಾಗುವ ಮಾದರಿಯ ರೀತಿಯಲ್ಲಿ ಅಕ್ಷರಗಳಿಗೆ ಸಂಖ್ಯೆಗಳನ್ನು ಜೋಡಿಸಲಾಗುತ್ತದೆ.
ಉದಾ- TRAIN ಎಂಬ ಪದವು 23456 ಸಂಖ್ಯೆಗಳಲ್ಲಿ coding ಆಗಿದ್ದರೆ, RAIN ಎಂಬುದನ್ನು ಹೇಗೆ code ಮಾಡುವಿರಿ?
ಅ) 3456 ಬ) 3546 ಕ) 2345 ಡ) 2456
ಪರಿಹಾರ-
Word | T | R | A | I | N |
Code | 2 | 3 | 4 | 5 | 6 |
ಕೋಷ್ಟಕದಲ್ಲಿ ತೋರಿಸಿದಂತೆ ಮಾದರಿಯಂತೆ RAIN – 3456
ಉತ್ತರ- ಅ) 3456
ಉದಾ- SELDOM ಎಂಬುದು 124365 ಎಂಬುದಾಗಿ Code ಆಗಿದ್ದರೆ MODE ಅನ್ನು ಹೇಗೆ code ಮಾಡುವಿರಿ?
ಅ) 3621 ಬ) 6231 ಕ) 5632 ಡ) 6213
ಪರಿಹಾರ-
S – 1
E – 2
L – 4
D – 3
O – 6
M – 5
ಈಗ MODE ಎಂಬ ಅಕ್ಷರಗಳ ಮುಂದಿನ ಸಂಖ್ಯೆಗಳನ್ನು ಆರಿಸಿ, 5632
ಉತ್ತರ- ಕ) 5632
ನಿರ್ದಿಷ್ಟ ಮಾದರಿಯ CODING
ಇಲ್ಲಿ ಪ್ರತಿ ಅಕ್ಷರವು ಸಂಖ್ಯೆಯನ್ನು ಅನುಸರಿಸುತ್ತದೆ. ಈಗ A-Z ಅಕ್ಷರಗಳು 1 ರಿಂದ 26 ಸಂಖ್ಯೆಗಳಿಗೆ ಅನುಗುಣವೆಂದು ಭಾವಿಸಿದಾಗ, A=1 B=2 C=3 ಈ ರೀತಿ ಮುಂದುವರೆಯುತ್ತದೆ.
- ಮುಂದುಕ್ಕೆ ಸಾಗುವ ಸರಣಿ, A=1, B=2, …… Y=25, Z=26
ಉದಾ- PACE ಎಂಬುದು 16-1-3-5 ಆಗಿ code ಆಗಿದ್ದರೆ, RACE ಅನ್ನು ಹೇಗೆ code ಮಾಡುವಿರಿ?
ಅ) 18-1-3-5 ಬ) 16-1-3-5 ಕ) 16-3-5-1 ಡ) ಯಾವುದು ಅಲ್ಲ
ಪರಿಹಾರ- P 16 ಆಗಿದ್ದರೆ, R = 18 ಉಳಿದ ಅಕ್ಷರ ಅದೇ ಆಗಿರುವ ಕಾರಣ 18-1-3-5
ಉತ್ತರ- ಅ) 18-1-3-5
2. ಹಿಮ್ಮುಖ ಸಾಗುವ ಸರಣಿ Z=1 Y=2,…..B=25, A=26
ಉದಾ- GREAT 20-9-22-26-7 ಎಂಬದಾಗಿ code ಆಗಿದ್ದರೆ GATE ಅನ್ನು code ಮಾಡಿ
ಅ) 20-26-7-22 ಬ) 20-26-6-22 ಕ) 26-20-7-22 ಡ) 26-20-22-7
ಪರಿಹಾರ- ಎಲ್ಲಾ ಅಕ್ಷರಗಳ ಸಂಖ್ಯೆಗಳು ಮಾದರಿಯಲ್ಲಿಯೆ ಇವೆ, G=20, A=26, T=7, E=22 = 20-26-7-22
ಉತ್ತರ- ಅ) 20-26-7-22
3. ಬೇರೆ ರೀತಿಯ ಸರಣಿ- ಇಲ್ಲಿ ವಿಶಿಷ್ಟ ರೀತಿಯ ಮಾದರಿ ಇರುತ್ತದೆ. ಅದನ್ನು ಅಭ್ಯರ್ಥಿಗಳು ಸರಿಯಾಗಿ ಗಮನಿಸಬೇಕು. ಕೊಟ್ಟಿರುವ ಪ್ರಶ್ನೆಯಲ್ಲಿನ ಮಾಹಿತಿಯನ್ನು ಸರಿಯಾಗಿ ಓದಬೇಕು. ಒಂದು ವೇಳೆ A=3, B=4, Z=28; ಹಾಗೂ A=5, B=7, C=9 ಆಗಿದ್ದರೆ. ಈ ರೀತಿಯ ಪೂರ್ವ ಮಾಹಿತಿಯ ಕಡೆ ಗಮನವಿಡಬೇಕು
ಉದಾ- FRANCE 10-22-5-18-7-9 ಎಂಬುದಾಗಿ code ಆಗಿದ್ದರೆ INDIA ಇದನ್ನು ಹೇಗೆ code ಮಾಡುವಿರಿ?
ಅ) 13-18-8-13-5 ಬ) 13-17-6-12-4 ಕ) 12-17-7-12-5 ಡ) ಯಾವುದು ಅಲ್ಲ
ಪರಿಹಾರ- ಈ ಮಾದರಿಯು ಈ ಕೆಳಗಿನ ಕೋಷ್ಟಕವನ್ನು ಅನುಸರಿಸುತ್ತದೆ
A 05 | B 06 | C 07 | D 08 | E 09 | F 10 | G 11 | H 12 | I 13 | J 14 | K 15 | L 16 | M 17 |
N 18 | O 19 | P 20 | Q 21 | R 22 | S 23 | T 24 | U 25 | V 26 | W 27 | X 28 | Y 29 | Z 30 |
ಈ ರೀತಿಯಲ್ಲಿ INDIA ಎಂಬುದು 13-18-8-13-5
ಉತ್ತರ- ಅ) 13-18-8-13-5
MIXED CODING
ಇಲ್ಲಿ ಅಕ್ಷರ ಮತ್ತು ಸಂಖ್ಯೆ ಎರಡನ್ನು ಬಳಸಿ code ಮಾಡಲಾಗುತ್ತದೆ. ಪ್ರಶ್ನೆಯಲ್ಲಿನ ಮಾದರಿಯನ್ನು ಸರಿಯಾಗಿ ಓದಬೇಕು.
ಉದಾ- A3T15R ಎಂಬುದು ACTOR ಎಂದಾದರೆ ಮತ್ತು D1T5 ಎಂಬುದು DATE ಆದರೆ, ROTATE ಅನ್ನು ಹೇಗೆ code ಮಾಡುವಿರಿ?
ಅ) R15T1T5 ಬ) R16T1T5 ಕ) R15T1T6 ಡ) L15C1T7
ಪರಿಹಾರ- ಕೊಟ್ಟಿರುವ ಮಾದರಿಯಲ್ಲಿ ACTOR ಪದದ ಮೂರು ಅಕ್ಷರಗಳು ಅದೇ ಜಾಗದಲ್ಲಿವೆ. C ಯು ಮುಂದುವರೆದ ಸರಣಿಯ ಸಂಖ್ಯೆಯ ಕೊಷ್ಟಕದಂತೆ 3 ಆಗಿದ್ದು O 15 ಆಗಿದೆ. ಇದೇ ರೀತಿ DATE ಪದವೂ ಇದೆ. O =15, A=1, E=5, ಹಾಗಾಗಿ R15T1T5
ಉತ್ತರ- ಅ) R15T1T5
ಉದಾ- MISSION ಎಂಬುದು +!??!^$ ಎಂದಾದರೆ ಮತ್ತು LENS ಎಂಬುದು @#$? ಆದರೆ, LION ಅನ್ನು ಹೇಗೆ code ಮಾಡುವಿರಿ?
ಅ) @!^$ ಬ) @!$# ಕ) ??## ಡ) ಯಾವುದು ಅಲ್ಲ
ಪರಿಹಾರ- LION = L+ION ಕೊಟ್ಟಿರುವ ಮಾದರಿಯಲ್ಲಿ L ಅನ್ನು LENS ಮತ್ತು ION ಅನ್ನು MISSION ಇಂದ ತೆಗೆದುಕೊಳ್ಳಿ. ಈಗ ಸರಿಯಾಗಿ ಗಮನಿಸಿದರೆ, L=@ I=! O=^ N=$, @!^$
ಉತ್ತರ- ಅ) @!^$
CODED STATEMENTS
ಇಲ್ಲಿ code ಭಾಷೆಯಲ್ಲಿನ ವಾಕ್ಯವನ್ನು ನೀಡಲಾಗಿತ್ತದೆ. ಮತ್ತು ಅದರ ಅರ್ಥವನ್ನು ನೀಡಲಾಗುತ್ತದೆ.
- ಒಂದು code ಭಾಷೆಯಲ್ಲಿ ʼdo re meʼ ಎಂದರೆ ʼhe is lateʼ, ʼfa me laʼ ಎಂದರೆ she is early, ʼso ti doʼ ಎಂದರೆ ʼhe leaves soonʼ ಈ ಭಾಷೆಯ ಯಾವ ಪದ late ಎಂದಾಗುತ್ತದೆ?
ಅ) la ಬ) do ಕ) me ಡ) re
ಪರಿಹಾರ- do re me = he is late …….. (i)
fa me la = she is early ……(ii)
so ti do = he leaves soon…….(iii)
ಈಗ ಸರಿಯಾಗಿ ಗಮನಿಸಿ, (i), (ii) ಅನ್ನು ಹೋಲಿಸಿ ವಾಕ್ಯದಲ್ಲಿನ me ಎಂಬುದು is ಎಂದರ್ಥ
(i), (iii) ಹೋಲಿಸಿ do ಅಂದರೆ he
ಈಗ ನಮಗೆ ಬೇಕಾದ late ಎಂಬ ಪದ (i) ಅಲ್ಲಿ ಇದೆ. ಅದರಲ್ಲಿ do ಎಂದರೆ he, ಮತ್ತು me ಎಂದರೆ is ಹಾಗಾಗಿ
re ಎಂದರೆ late
ಉತ್ತರ- ಡ) re
2. ಮಳೆ ಎಂದರೆ ನೀರು, ನೀರು ಎಂದರೆ ರಸ್ತೆ, ರಸ್ತೆ ಎಂದರೆ ಮೋಡ, ಮೋಡ ಎಂಬುದು ಆಕಾಶ, ಆಕಾಶ ಎಂದರೆ ಸಾಗರ, ಮತ್ತು ಸಾಗರ ಎಂಬುದು ದಾರಿ ಆದರೆ ವಿಮಾನಗಳು ಎಲ್ಲಿ ಹಾರುತ್ತವೆ.
ಅ) ರಸ್ತೆ ಬ) ಸಾಗರ ಕ) ಮೋಡ ಡ) ನೀರು
ಪರಿಹಾರ- ನಮಗೆ ಗೊತ್ತಿರುವಂತೆ ವಿಮಾನಗಳು ಆಕಾಶಲ್ಲಿ ಹಾರುತ್ತವೆ. ಇಲ್ಲಿ sky ಅನ್ನು ಸಾಗರ ಎನ್ನಲಾಗಿದೆ ಹಾಗಾಗಿ sea
ಉತ್ತರ- ಬ) ಸಾಗರ
ಬೇರೆ ಮಾದರಿಯ ಉದಾಹರಣೆ
3. ಒಂದು ನಿರ್ದಿಷ್ಟ code ಅಲ್ಲಿ 247 ಎಂದರೆ ʼspread red carpetʼ, 256 ಎಂದರೆ ʼdust one carpetʼ, 236 ಎಂದರೆ ʼone red carpetʼ ಆದರೆ ಯಾವ ಸಂಖ್ಯೆ dust ಎಂಬುದರ code ಆಗಿದೆ?
ಅ) 2 ಬ) 3 ಕ) 5 ಡ) 6
ಪರಿಹಾರ- ಮೂರು ವಾಕ್ಯಗಳಲ್ಲಿ carpet ಇದೆ, ಮತ್ತು ಸಾಮಾನ್ಯ ಸಂಖ್ಯೆ 2 ಆಗಿದೆ. ಹಾಗಾಗಿ 2= carpet. ಎರಡನೇ ಮತ್ತು ಮೂರನೇ ವಾಕ್ಯದಲ್ಲಿ one ಇದೆ ಜೊತೆಗೆ 6 ಇದೆ ಹಾಗಾಗಿ 6= one, ಎರಡನೇ ವಾಕ್ಯದಲ್ಲಿ dust ಇದ್ದು ಉಳಿದ ಸಂಖ್ಯೆ 5
ಉತ್ತರ- ಕ) 5
4. ಒಂದು code ಭಾಷೆಯಲ್ಲಿ ʼSiberia is a cold placeʼ, ಅನ್ನು ʼa cold is place syberiaʼ ಎಂದು ಬರೆಯಲಾಗಿದೆ. ಅದೆ ಭಾಷೆಯಲ್ಲಿ ʼWater freezes to ice hereʼ, ಅನ್ನು ʼfreezes here ice to waterʼ ಬರೆಯಲಾಗಿದೆ. ನೀವು ʼcovers ten percent of earthʼ ಅನ್ನು ಹೇಗೆ ಬರೆಯುವಿರಿ?
ಅ) covers earth ten percent of
ಬ) covers earth of percent ten
ಕ) earth covers ten percent of
ಡ) ಯಾವುದು ಅಲ್ಲ
ಪರಿಹಾರ- ಇಲ್ಲಿ ವಾಕ್ಯದಲ್ಲಿನ ಪದಗಳ ಆರಂಭದ ಅಕ್ಷರವನ್ನು ಅಕ್ಷರಗಳ ಏರಿಕೆ ಕ್ರಮದ ಮೂಲಕ code ಭಾಷೆಯಲ್ಲಿ ಬರೆಯಲಾಗಿದೆ.Siberia is a cold place = a cold is place syberia, ಇಲ್ಲಿ ಪದಗಳ ಮೊದಲ ಅಕ್ಷರದ ಅನುಕ್ರಮವನ್ನು ಪಾಲಿಸಲಾಗಿದೆ. ಅದೆ ರೀತಿ ಎರಡನೆ ಮಾದರಿಯು ಇದೆ. ಹಾಗಾಗಿ covers ten percent of earth = c ಮೊದಲು ಬರುತ್ತದೆ, covers, ನಂತರ e ಹಾಗಾಗಿ earth, ನಂತರ o, p ಮತ್ತು t. covers earth of percent ten
ಉತ್ತರ- ಬ) covers earth of percent ten
CONCLUSION
Coding ಮತ್ತು Decoding ಈ ಭಾಗವು ಹಲವು ಸ್ಪರ್ದಾತ್ಮಕ ಪರೀಕ್ಷೆಗಳಲ್ಲಿ ಬರುತ್ತದೆ. ಇದು ಕ್ಲಿಷ್ಟಕರವೆನಿಸಿದರೂ ಸರಿಯಾದ ರೀತಿಯ ಅಭ್ಯಾಸದಿಂದ ಇದನ್ನು ನಾವು ಸುಲಭವಾಗಿ ಬಿಡಿಸಬಹುದು. ಇವು ಒಂದು ನಿರ್ದಿಷ್ಟ ಮಾದರಿಯನ್ನು ಇಲ್ಲಾ ತತ್ವವನ್ನು ಅನುಸರಿಸುತ್ತವೆ. ಇದು ಮನೋಸಾಮರ್ಥ್ಯ ವಿಷಯದಲ್ಲಿದ್ದು ಇದನ್ನು ಎಲ್ಲಾ ಪರೀಕ್ಷೆಯಲ್ಲು ಕೇಳಲಾಗುತ್ತದೆ.
ಪ್ರತಿಯೊಂದು ಕೆಲಸಕ್ಕೂ ಕೆಲವು ನಿರ್ದಿಷ್ಟ ಕೌಶಲ್ಯಗಳು ಬೇಕಾಗುತ್ತವೆ. ಉದ್ಯೋಗವನ್ನು ಪಡೆಯಲು ಅಗತ್ಯವಾದ ಮೂಲಭೂತ ಕೌಶಲ್ಯಗಳು ಯೋಗ್ಯ ಕೌಶಲ್ಯಗಳು ಮುಂದಿನ ಸುತ್ತುಗಳಿಗೆ ಅರ್ಹತೆ ಪಡೆಯುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ.
ಪ್ರಸ್ತುತ, ಪ್ರತಿ ಉದ್ಯೋಗವು ಪ್ರವೇಶ ಪರೀಕ್ಷೆಗಳನ್ನು ಹೊಂದಿದ್ದು, ಅಲ್ಲಿ ಅರ್ಜಿದಾರರ ಕೌಶಲ್ಯಗಳನ್ನು ಪರಿಶೀಲಿಸಲಾಗುತ್ತದೆ. ಪ್ರತಿ ಪ್ರವೇಶ ಪರೀಕ್ಷೆಯು ಕೆಲವು ರೀತಿಯ ಆಪ್ಟಿಟ್ಯೂಡ್ ಸುತ್ತನ್ನು ಒಳಗೊಂಡಿರುತ್ತದೆ, ಇದು ಈ ರೀತಿಯ ಪ್ರಶ್ನೆಗಳಿಂದ ತುಂಬಿರುತ್ತದೆ.
ಕೆ.ಎ.ಎಸ್ ಮತ್ತು ಪಿ.ಎಸ್.ಐ ನಂತಹ ಪರೀಕ್ಷೆಗಳಲ್ಲೂ ಇವು ನಿಮ್ಮ ಕೌಶಲ್ಯಗಳನ್ನು ಪರೀಕ್ಷಿಸುವ ಸವಾಲುಗಳಾಗಿ ಬರುತ್ತವೆ. ಮನೊಸಾಮರ್ಥ್ಯದ ಇನ್ನೂ ಬೇರೆ ವಿಷಯಗಳ ಮೇಲಿನ e-book ಅನ್ನು ನೀವು ಡೌನ್‌ಲೋಡ್ ಮಾಡಬಹುದು ಅಲ್ಲದೆ ಓಲಿವ್‌ಬೋರ್ಡ್‌ನ ವೆಬ್‌ಸೈಟ್‌ನಲ್ಲಿ ಸಂಬಂಧಿಸಿದ ಬ್ಲಾಗ್ ಮತ್ತು ಮಾಕ್ ಪರೀಕ್ಷೆಗಳನ್ನು ಬರೆಯಬಹುದು.
FAQs
ಉ: ನಿರ್ದಿಷ್ಟ ನಿಯಮಗಳು ಮತ್ತು ನಿಬಂಧನೆಗಳನ್ನು ಬಳಸಿಕೊಂಡು ನಿರ್ದಿಷ್ಟ ಮಾದರಿಗಳಲ್ಲಿ ಅಥವಾ code ಗಳಲ್ಲಿ ಪದಗಳನ್ನು, ಸಂಖ್ಯೆಗಳನ್ನು ಗುಪ್ತ ಅಥವಾ ಗೂಢಾಲಿಪಿಯನ್ನಾಗಿ(Encryption) ಮಾಡುವುದಕ್ಕೆ coding ಎನ್ನುತ್ತಾರೆ.
ಉ: Decoding ಎನ್ನುವುದು ನಿರ್ದಿಷ್ಟ ರೂಪಗಳಿಂದ ಮಾದರಿಗಳನ್ನು ಮೂಲ ರೂಪಗಳಿಗೆ ಡೀಕ್ರಿಪ್ಟ್ ಮಾಡಲು ಬಳಸುವ ಪ್ರಕ್ರಿಯೆಯಾಗಿದೆ.
Oliveboard is a learning & practice platform for premier entrance exams. We have helped over 1 crore users since 2012 with their Bank, SSC, Railways, Insurance, Teaching and other competitive Exams preparation.
Oliveboard Live Courses & Mock Test Series
- Download IRDAI Assistant Manager PYQs
- Monthly Current Affairs 2024
- Download RBI Grade B PYQ PDF
- Download IFSCA Grade A PYQs
- Download SEBI Grade A PYQs
- Attempt Free SSC CGL Mock Test 2024
- Attempt Free IBPS Mock Test 2024
- Attempt Free SSC CHSL Mock Test 2024
- Download Oliveboard App
- Follow Us on Google News for Latest Update
- Join Telegram Group for Latest Govt Jobs Update