Reasoning ಎಂಬ ವಿಷಯವು ಮನೋ ಸಾಮರ್ಥ್ಯದಲ್ಲಿನ ಒಂದು ಮುಖ್ಯ ಭಾಗ. KAS ಮತ್ತು PSI ಪರೀಕ್ಷೆಗಾಗಿ logical reasoning ಎಂಬ ವಿಷಯದ ಬಗ್ಗೆ ಈ ಬ್ಲಾಗಿನಲ್ಲಿ ನೀವು ತಿಳಿಯಲಿದ್ದೀರಿ. Reasoning ಅಲ್ಲಿ ಬರುವಂತಹ ವಿಧಗಳು, logical and Analytical reasoning ಬಗೆಗಿನ ಮಾಹಿತಿಯನ್ನು ಪಡೆಯಲಿದ್ದೀರಿ. Logical and Analytical Reasoning ವಿಷಯವನ್ನು ಸರಿಯಾಗಿ ಅರ್ಥೈಸಿಕೊಳ್ಳುವುದು ಪ್ರತೀ ಅಭ್ಯರ್ತಿಗೂ ಅತ್ಯವಶ್ಯಕ ಮತ್ತು ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಲು ಇದು ಸಹಾಯಕವಾಗಲಿದೆ. ಮನೋಸಾಮರ್ಥ್ಯದ ವಿಷಯಗಳು ಪರೀಕ್ಷೆಗೆ ಅಷ್ಟೇ ಮುಖ್ಯ. ಮನೋಸಾಮರ್ಥ್ಯದ ಇತರ ವಿಷಯಗಳ ಮೇಲಿನ ಉಚಿತ e-book ಅನ್ನು ನೀವು ಡೌನ್‌ಲೋಡ್ ಮಾಡಬಹುದು.
Reasoning
Reasoning ಅಂದರೆ ಸತ್ಯದ ಅನ್ವೇಷಣೆಯಲ್ಲಿ ಅಸ್ತಿತ್ವದಲ್ಲಿರುವ ಮಾಹಿತಿಯ ಬಗೆಗಿನ ತೀರ್ಮಾನಗಳ ಮೇಲೆ logic (ತರ್ಕವನ್ನು) ಅನ್ವಯಿಸುವ ಸಾಮರ್ಥ್ಯ.Reasoning ಅನ್ನು ಕೆಲವೊಮ್ಮೆ Rationality ಎಂತಲೂ ಕರೆಯಲಾಗುತ್ತದೆ. Reasoning ಎನ್ನುವುದು ಮಾನವನ ಚಟುವಟಿಕೆಗಳಾದ ತತ್ವಶಾಸ್ತ್ರ, ವಿಜ್ಞಾನ, ಗಣಿತ ಇಂತಹ ವಿಷಯಗಳೊಂದಿಗೆ ನಿಕಟ ಸಂಬಂಧ ಹೊಂದಿದೆ. ಈ ಸಾಮರ್ಥ್ಯವು ಮಾನವನು ಹೊಂದಿರುವ ವಿಶೇಷ ಸಾಮರ್ಥ್ಯವಾಗಿದೆ.
Reasoning ಆಲೋಚನೆ ಮತ್ತು ಅರಿವಿನೊಂದಿಗೆ ಬೆಸೆದಿದೆ. ಇದು ನಮ್ಮ ಯೋಚನಾ ಸಾಮರ್ಥ್ಯವನ್ನು ಪರೀಕ್ಷಿಸುವ ಗುರಿಯನ್ನು ಹೊಂದಿರುತ್ತದೆ. Reasoning ಅನ್ನು ಹಲವು ರೀತಿಯಲ್ಲಿ ವಿಂಗಡಿಸಬಹುದು. Verbal Reasoning, Non-verbal Reasoning, Analytical Reasoning, Logical Reasoning ಹೀಗೆ.
Logical Reasoning
ಈಗಾಗಲೇ ಹೇಳಿದಂತೆ Reasoning ನಮ್ಮ ಯೋಚನಾ ಸಾಮರ್ಥ್ಯವನ್ನು ಪರೀಕ್ಷಿಸುವ ಗುರಿಯನ್ನು ಹೊಂದಿರುತ್ತದೆ. ನಾವು ಯಾವಾಗಲು ನಮ್ಮ ಸುತ್ತಲಿನ ವಸ್ತುಗಳ ಬಗ್ಗೆ, ಸನ್ನಿವೇಶಗಳ ಬಗ್ಗೆ, ವಿಷಯಗಳ ಬಗ್ಗೆ ವಿವರಣೆ ಅಥವಾ ಸಮಜಾಯಿಷಿಯನ್ನು ಕೊಡುತ್ತೇವೆ. ಈಗ ಉದಾಹರಣೆಯೊಂದಿಗೆ ಹೇಳುವುದಾದರೆ, ಈಗ ನಿಮ್ಮ ಮುಂದೆ ಒಂದು ಪ್ಲಾಸ್ಟಿಕ್ ಹಾವು ಇದೆ ಎಂದು ಭಾವಿಸಿ, ನೀವು ಅದನ್ನು ನೋಡಿದಾಗ ನಿಮಗೆ ತಿಳಿಯುತ್ತದೆ ಇದು ಪ್ಲಾಸ್ಟಿಕ್ ಹಾವು ಎಂದು, ಏಕೆಂದರೆ ನೀವು ಅಲ್ಲಿ ವಿಚಾರ ಮಾಡಿದಿರಿ, ನಿಜವಾದ ಹಾವಾಗಿದ್ದಲ್ಲೆ ಅದು ಚಲಿಸುತ್ತಿತ್ತು ಎಂದು. ನಿಮಗೆ ಗೊತ್ತು ಜೀವವಿರುವಂತಹ ಪ್ರತೀ ಜೀವಿಯು ಚಲಿಸುತ್ತದೆ. ಈ ರೀತಿಯ ನಿಖರ ವಿವರಣೆಯನ್ನು ನೀಡಲು ನಾವು logic ಅನ್ನು ಬಳಸುತ್ತೇವೆ. ಸರಳವಾಗಿ ನಿಮಗೆ ಈಗಾಗಲೇ ತಿಳಿದಿರುವ ಸಂಗತಿಗಳನ್ನು ಕೊಟ್ಟಿರುವ ಸನ್ನಿವೇಶದಲ್ಲಿ ಸರಿಯಾಗಿ ಬಳಸುವದೊಂದೆ ಇಲ್ಲಿರುವ ಸವಾಲು.
Logic ಎಂದರೇನು?
ಮಾನ್ಯವಾದ ನಿರ್ಣಯಗಳನ್ನು ತೆಗೆದುಕೊಳ್ಳಲು ಸನ್ನಿವೇಶಗಳ ಮೇಲೆ ಕಾರಣಗಳ ತತ್ವಗಳನ್ನು ಹಾಕುವುದು (Applying principles of reasoning). ಇಲ್ಲಿ ಸಂಪೂರ್ಣ ತರ್ಕವನ್ನು ಅಳವಡಿಸಿಕೊಳ್ಳುವುದು, ಅಸ್ಪಷ್ಟತೆಗೆ ಯಾವುದೇ ಜಾಗವಿರುವುದಿಲ್ಲ. ಈ Reasoning ಇವುಗಳ ಉದ್ದೇಶ ನಿಮ್ಮ ನಿರ್ಣಯಗಳನ್ನು ಮತ್ತು ನಿಮ್ಮ ಕ್ರೀಯೆಗಳನ್ನು ನೀವು ಹೇಗೆ ಸಮರ್ಥಿಸಿಕೊಳ್ಳಬಲ್ಲಿರಿ ಎಂಬುದು. Logical Reasoning ಮತ್ತು Analytical Reasoning ಇವು ಎರಡು ಒಂದರಿಂದ ಒಂದು ಭಿನ್ನವಾಗಿವೆ. ಯಾವುದೆ ಸನ್ನಿವೇಶವನ್ನು ನೀವು ವ್ಯಕ್ತಿನಿಷ್ಠರಾಗಿ ಅಥವಾ ವಸ್ತುನಿಷ್ಠರಾಗಿ ಯೋಚಿಸಬಹುದು. ಕೆಲವೊಂದು ಸನ್ನಿವೇಶಗಳನ್ನು ನಿರ್ಣಯಿಸಲು ನಿಮ್ಮ ದೃಷ್ಟಿಕೋನವನ್ನು ಬಳಸಬೇಕಾಗುತ್ತದೆ ಮತ್ತು ಕೆಲವೊಂದಕ್ಕೆ ನೀವು ಕೇವಲ ವಸ್ತುನಿಷ್ಠರಾಗಬೇಕಾಗುತ್ತದೆ.
ವ್ಯಕ್ತಿನಿಷ್ಠ
ಇಲ್ಲಿ ನೀವು ನಿಮ್ಮ ದೃಷ್ಟಿಕೋನದ ಮೂಲಕ ಯೋಚಿಸುತ್ತೀರಿ. ನಿಮ್ಮ ಅನುಭವ ಮತ್ತು ನಿಮ್ಮ ವಿಚಾರಗಳಿಗೆ ಅನುಗುಣವಾಗಿ ನೀವು ನಿರ್ಣಯ ತೆಗೆದುಕೊಳ್ಳುತ್ತೀರಿ. ಕೊಲೆಗಡುಕನನ್ನು ಗಲ್ಲಿಗೇರಿಸುತ್ತಿರುವ ನಿರ್ಣಯ ಸರಿಯೆ ಎಂಬ ಪ್ರಶ್ನೆ ಬಂದಾಗ, ನಿಮ್ಮ ವೈಯಕ್ತಿಕ ಅಭಿಪ್ರಾಯ ಅವನಿಗೆ ಮತ್ತೋಂದು ಅವಕಾಶ ನೀಡಬೇಕು ಎಂಬುದಿದ್ದಾಗ ಅದು ವ್ಯಕ್ತಿನಿಷ್ಠ ಅಭಿಪ್ರಾಯವಾಗುತ್ತದೆ.
ವಸ್ತುನಿಷ್ಠ
ವ್ಯಕ್ತಿನಿಷ್ಠಕ್ಕೆ ವಿರುದ್ದವಾಗಿ ಇದು ನಿಲ್ಲುತ್ತದೆ. ಇಲ್ಲಿ ನೀವು ಕೇವಲ ಆ ಸನ್ನಿವೇಶಕ್ಕೆ ನಿಮ್ಮ logic ಅನ್ನು ಬಳಸಿ ನಿರ್ಣಯ ತೆಗೆದುಕೊಳ್ಳುತ್ತೀರಿ, ಇಲ್ಲಿ ನಿಮ್ಮ ವೈಯಕ್ತಿಕ ಅಭಿಪ್ರಾಯ ನಿಮ್ಮ ನಿರ್ಣಯದ ಮೇಲೆ ಪರಿಣಾಮ ಬೀರುವುದಿಲ್ಲ. ನೀವು ಎಂಬುದರ ಮುಂಚೆ ಸನ್ನಿವೇಶ ಇಲ್ಲಿ ಬರತ್ತದೆ.
ಇವೆರಡರಲ್ಲಿ ಇದೆ ಸರಿ ಇದೆ ತಪ್ಪು ಎಂಬುದಿಲ್ಲ. ಸನ್ನಿವೇಶಕ್ಕೆ ಅನುಗುಣವಾಗಿ ನಮ್ಮ ನಿರ್ಣಯಗಳನ್ನು ತೆಗೆದುಕೊಳ್ಳಬೇಕು. ಆಯಾ ಪರಿಸ್ಥಿತಿಗೆ ಅನುಗುಣವಾಗಿ, ಸರಿಯಾದ ನಿರ್ಣಯವನ್ನು ಪಡೆಯಲು ತಾರ್ಕಿಕವಾಗಿ ಯೋಚಿಸಬೇಕು. Logical Reasoning ಅಲ್ಲಿ ಮುಖ್ಯವಾಗಿ ಎರಡು ವಿಧಗಳಿವೆ.
- Deductive Reasoning
- Inductive Reasoning
Deductive Logical Reasoning
ಪ್ರಮೇಯ: ಎಲ್ಲಾ ನಾಯಿಗಳು ದೊಡ್ಡ ಕಿವಿಗಳನ್ನು ಹೊಂದಿರುತ್ತವೆ
ಪ್ರಮೇಯ: ಹೌಂಡ್ ಒಂದು ನಾಯಿ
ತೀರ್ಮಾನ: ಹಾಗಾಗಿ ಹೌಂಡ್ ದೊಡ್ಡ ಕಿವಿಗಳನ್ನು ಹೊಂದಿದೆ.
Deductive reasoning ಅಲ್ಲಿ ಪ್ರಮೇಯಗಳು ಸತ್ಯವಾಗಿದ್ದಲ್ಲಿ ತೀರ್ಮಾನವು ಖಂಡಿತವಾಗಿಯೂ ಸತ್ಯವಾಗಿರುತ್ತದೆ. ಹಾಗಾಗಿ deductive inference ಅಲ್ಲಿ ತೀರ್ಮಾನವು ಪ್ರಮೇಯಗಳಿಗಿಂತ ಸಾಮಾನ್ಯವಾಗಿರುವುದಿಲ್ಲ. ಇಲ್ಲಿ ಕೊಟ್ಟಿರುವ ಉಲ್ಲೇಖದಂತೆ ಎಲ್ಲಾ ನಾಯಿಗಳು ದೊಡ್ಡ ಕಿವಿಗಳನ್ನು ಹೊಂದಿವೆ ಮತ್ತು ಹೌಂಡ್ ಒಂದು ನಾಯಿ ಎಂಬ ಪ್ರಮೇಯಗಳಿದ್ದಾಗ, ಹೌಂಡ್ ದೊಡ್ಡ ಕಿವಿಗಳನ್ನು ಹೊಂದಿದೆ ಎಂಬ ವಾದ ಬರುತ್ತದೆ. ಹೇಗಿದ್ದರೂ ಇಲ್ಲಿ ಕೊಟ್ಟಿರುವ ಉದಾಹರಣೆ ಹೇಳುವಂತೆ ದೊಡ್ಡ ಕಿವಿಗಳನ್ನು ಹೊಂದಿರುವುದು ನಾಯಿಗಳ ಹುಟ್ಟು ಪ್ರಕೃತಿ ಎಂದಾಗ ಈ ವಾದದ ಹಿಂದೆ logical ಯೋಚನೆ ಇದೆ. ಹಾಗಾಗಿ ಈ ವಾದ ಮಾನ್ಯವಾಗಿದೆ. ಆದರೆ ಇದು ಸತ್ಯವೇ? ಅಲ್ಲ. Deductive Reasoning ವಿಶ್ಲೇಷಣಾತ್ಮಕವಾಗಿರುತ್ತದೆ(Analytical).
ತೀರ್ಮಾನಗಳು ಕೊಟ್ಟಿರುವ ಪ್ರಮೇಯಗಳ ಆಧಾರದ ಮೇಲಿರುತ್ತವೆ. ಕೊಟ್ಟಿರುವ ಪ್ರಮೇಯಗಳಲ್ಲಿ ಯಾವುದಾದರು ಒಂದು ತಪ್ಪಿದ್ದಾಗ ತೀರ್ಮಾನವೂ ತಪ್ಪಾಗಿರುತ್ತದೆ. ತೀರ್ಮಾನ ಮಾನ್ಯವಾಗಿದ್ದರೂ ಸಹ ಪ್ರಮೇಯ ತಪ್ಪಿದ್ದಲ್ಲಿ ತೀರ್ಮಾನವೂ ತಪ್ಪಾಗುತ್ತದೆ. Deductive reasoning ಅನ್ನು ಇನ್ನೆರಡು ವಿಧಗಳಾಗಿ ವಿಂಗಡಿಸಬಹುದು.
- Immediate
- Mediate or Syllogism
Immediate Inference or Immediate Reasoning
ಇಲ್ಲಿ ತೀರ್ಮಾನಗಳನ್ನು ಕೇವಲ ಒಂದು ಪ್ರತಿಪಾದನೆಯಿಂದ ನಿರ್ಧರಿಸಲಾಗುತ್ತದೆ. ಇದನ್ನು ಉದಾಹರಣೆಯೊಂದಿಗೆ ನೋಡೋಣ
Immediate Inference ಅನ್ನು ಎರಡು ರೀತಿಯಲ್ಲಿ ಪಡೆಯಬಹುದು.
- By Implication (ಸೂಚ್ಯಾರ್ಥ)
- By Conversion (ಪರಿವರ್ತನೆ)
By Implication:
ಕೊಟ್ಟಿರುವ ಪ್ರತಿಪಾದನೆಗಳನ್ನು A ಆಗಿದ್ದಲ್ಲಿ ಅದು I ಎಂಬ ತೀರ್ಮಾನವು ಸರಿಯೆಂಬುದನ್ನು ಸೂಚಿಸುತ್ತದೆ.
ಹೇಳಿಕೆ | ಹೇಳಿಕೆಯ ಸೂಚ್ಯಾರ್ಥ |
---|---|
ಎಲ್ಲಾ ಕುರ್ಚಿಗಳು ಮೇಜುಗಳು (A) | ಕೆಲವು ಕುರ್ಚಿಗಳು ಮೇಜುಗಳು (I) |
ಯಾವ ಕುರ್ಚಿಯು ಮೇಜಲ್ಲ (E) | ಕೆಲವು ಕುರ್ಚಿಗಳು ಮೇಜುಗಳಲ್ಲ (O) |
ಈಗ ಕೊಟ್ಟಿರುವ ಪ್ರತಿಪಾದನೆಗಳನ್ನು ಮತ್ತೊಮ್ಮೆ ನೋಡಿ. ಈಗ ಯಾವಾಗ ʼನಾವು ಎಲ್ಲಾ ಕುರ್ಚಿಗಳು ಮೇಜುಗಳುʼ ಎಂದು ಹೇಳುತ್ತೇವೋ ಕೆಲವು ಎಂಬುದು ಎಲ್ಲಾ ಎಂಬುದರ ಒಂದು ಭಾಗವೆಂಬ ಸಾಮಾನ್ಯ ಅರಿವಿನ ಆಧಾರದಿಂದ ಈ ಪ್ರತಿಪಾದನೆ ಸೂಚಿಸುವುದು ʼಕೆಲವು ಕುರ್ಚಿಗಳು ಮೇಜುಗಳುʼ ಎಂದು.
ಇದೇ ರೀತಿ ನಾವು E ಎಂಬ ಪ್ರತಿಪಾದನೆ O ಎಂಬ ಸೂಚನೆಯನ್ನು ನೀಡುತ್ತದೆ. ನಾವು ʼಯಾವ ಕುರ್ಚಿಯು ಮೇಜಲ್ಲʼ ಎಂದಾಗ ನಾವು ನಿಖರವಾಗಿ ಹೇಳಬಹುದು ʼಕೆಲವು ಕುರ್ಚಿಗಳು ಮೇಜಲ್ಲʼ.
By Conversion
ಈ ಭಾಗವನ್ನು ತಿಳಿಯುವ ಮೊದಲು
Convertend – ಮೂಲ ಪ್ರತಿಪಾದನೆ
Converse – ಹೊಸ ಪ್ರತಿಪಾದನೆ
Conversion – ಇದು ಪ್ರತಿಪಾದನೆ
ಈ ಪ್ರಕ್ರಿಯೆ ಎರಡು ಹಂತಗಳನ್ನು ಒಳಗೊಂಡಿದೆ. ವಿಷಯ ಮತ್ತು ಊಹಿಸಿದ ವಿಷಯವನ್ನು ಅದಲುಬದಲು ಮಾಡುವುದು ಮತ್ತು ಕೊಟ್ಟಿರುವ ಪ್ರತಿಪಾದನೆಯನ್ನು ಕೆಳಗೆ ನೀಡಲಾದ ಮಾದರಿಯಲ್ಲಿ ಬದಲಾಯಿಸುವುದು.
ಹೇಳಿಕೆಗಳು | ಮಾನ್ಯವಾದ Conversion |
---|---|
Universal Positive (A) ಎಲ್ಲಾ ಕುರ್ಚಿಗಳು ಮೇಜುಗಳು | Only Particular Positive (I) ಕೆಲವು ಕುರ್ಚಿಗಳು ಮೇಜುಗಳು ಕೆಲವು ಮೇಜುಗಳು ಕುರ್ಚಿಗಳು |
Universal Negative (E) ಯಾವ ಕುರ್ಚಿಯು ಮೇಜುಗಳಲ್ಲ | Universal Negative (E) ಯಾವ ಮೇಜೂ ಕುರ್ಚಿಯಲ್ಲ |
Particular Positive (I) ಕೆಲವು ಕುರ್ಚಿಗಳು | Only Particular Positive (I) ಕೆಲವು ಮೇಜುಗಳು ಕುರ್ಚಿಗಳು |
Particular Negative (o) ಕೆಲವು ಕುರ್ಚಿಗಳು ಮೇಜುಗಳಲ್ಲ | ಯಾವುದೇ conversion ಇಲ್ಲ |
ಈ conversion ಟೇಬಲ್ ಕೇವಲ immediate inference ಅಲ್ಲದೆ mediate inferenceಗೂ ಸಹ ಉಪಯುಕ್ತವಾಗಲಿದೆ. ಕೆಲವೊಂದು ಬಾರಿ conversion ಮೇಲೆ ಮಾತ್ರ ಪ್ರಶ್ನೆ ಬರಬಹುದು.
ಉದಾ- ಕೆಲವು ಪುರುಷರು ಪ್ರಾಮಾಣಿಕರು ಈ ಹೇಳಿಕೆಯಿಂದ ತೀರ್ಮಾನಿಸಲಾದ ಈ ಕೆಳಗಿನವುಗಳಲ್ಲಿ ಯಾವುದು ಸರಿಯಾಗಿದೆ?
A) ಕೆಲವು ಪ್ರಾಮಾಣಿಕರು ಪುರುಷರಲ್ಲ
b) ಎಲ್ಲಾ ಪ್ರಾಮಾಣಿಕರು ಪುರುಷರಲ್ಲ
c) ಕೆಲವು ಪ್ರಾಮಾಣಿಕರು ಪುರುಷರು
d) ಮೇಲಿನ ಯಾವುದು ಅಲ್ಲ
ಪರಿಹಾರ: ಮೇಲೆ ನೀಡಿದ ಟೇಬಲ್‌ನಂತೆ ಇದು Particular Positive Statement, ಹಾಗಾಗಿ ಇಲ್ಲಿ ಉತ್ತರ ಆಯ್ಕೆ
c) ಕೆಲವು ಪ್ರಾಮಾಣಿಕರು ಪುರುಷರು
Syllogism or Mediate Reasoning
ಈ ರೀತಿಯ ತರ್ಕಗಳಲ್ಲಿ ಯಾವುದೇ ಒಂದು ಸನ್ನಿವೇಶವನ್ನು ವಿಶ್ಲೆಷಿಸಲು ಅದನ್ನು ಅಂಶಗಳಾಗಿ ವಿಂಗಡಿಸಿ ಪ್ರತೀ ಅಂಶವನ್ನು ಪರಿಗಣಿಸಿದ ತೀರ್ಮಾನಗಳನ್ನು ತೆಗೆದುಕೊಳ್ಳಲಾಗುವುದು. ಕೊಡಲಾಗುವ ಪ್ರತಿಪಾದನೆಗಳ ಆಧಾರದ ಮೇಲೆ syllogism ಅನ್ನು 4 ವಿಧವಾಗಿ ವಿಂಗಡಿಸಲಾಗಿದೆ. Categorial:
Categorial
ಇಲ್ಲಿ ಕೊಡಲಾಗುವ ವಿಷಯ ಮತ್ತು ಪ್ರತಿಪಾದನೆಗಳ ಮಧ್ಯೆ ಇರುವ ಸಂಬಂಧಗಳಿಗೆ ಯಾವುದೇ ಕರಾರು ಇರುವುದಿಲ್ಲ.
ಉದಾ- I ಎಲ್ಲಾ ರೈಲುಗಳು ವಿಮಾನಗಳು
II ಎಲ್ಲಾ ನಾಯಿಗಳು ಪ್ರಾಣಿಗಳು
Hypothetical
ವಿಷಯ ಮತ್ತು ಪ್ರತಿಪಾದನೆಯ ನಡುವಿನ ಸಂಬಂಧ ಷರತ್ತುಬದ್ಧವಾಗಿರುತ್ತದೆ.
ಉದಾ- ಮಳೆ ಬಂದರೆ ಅವನು ಕಾರ್ಯಕ್ರಮಕ್ಕೆ ಹೋಗುವುದಿಲ್ಲ.
Disjunctive
ಈ ರೀತಿಯ ತರ್ಕಗಳಲ್ಲಿ ಬದಲಾವಣೆಯ ಪ್ರತಿಪಾದನೆಗಳಿರುತ್ತವೆ.
ಉದಾ- ಅವನು ಒಂದೋ ಧೈರ್ಯವಂತನು ಇಲ್ಲವೋ ಶಕ್ತಿಶಾಲಿ
Relational
ಇಲ್ಲಿ ಪ್ರತಿಪಾದನೆಗಳಲ್ಲಿ ನೀಡಲಾಗುವ ಅಂಶಗಳ ನಡುವೆ ಸಂಬಂಧವಿರುತ್ತದೆ
ಉದಾ- a>b>c>d
ಹೀಗಿರುವಾಗ a>d (ತೀರ್ಮಾನ)
Inductive Logical Reasoning
ಇಲ್ಲಿ ಯಾವುದಾದರೊಂದು ವಿಷಯವನ್ನು ಗಮನಿಸುವುದರಿಂದ, ಅನುಭವಕ್ಕೆ ಬರುವುದರಿಂದ ಅಥವಾ ಒಂದೇ ರೀತಿಯ ದೃಷ್ಟಾಂತಗಳನ್ನು ಕಾಣುವುದರಿಂದ ಸಾಮಾನ್ಯೀಕರಿಸಿದ ತೀರ್ಮಾನಗಳನ್ನು ತೆಗೆದುಕೊಳ್ಳಲಾಗುವುದು. ಇದು 100% ನಿಖರವಾಗಿ 100% ಸಲವೂ ಇರುವುದಿಲ್ಲ ಆದರೂ ಇದು ತೀರ್ಮಾನ ತೆಗೆದುಕೊಳ್ಳುವುದರ ಸುಲಭ ಮತ್ತು ತ್ವರಿತ ಹಾದಿಯಾಗಿದೆ.
ನಮ್ಮ ಈ ಜೀವಮಾನದಲ್ಲಿ ಪ್ರಾಣಿಗಳು ತಿನ್ನುವುದನ್ನು ನಾವು ಅನೇಕ ದೃಷ್ಟಾಂತಗಳನ್ನು ಕಂಡಿದ್ದೇವೆ ಅದು ಹಸುವಾಗಿರಲಿ, ಅನೆಯಾಗಿರಲಿ ಅಥವಾ ಕುದುರೆಯೆ ಆಗಿರಲಿ. ನಮಗೆ Inductive Reasoning ಹೇಳುವುದೇನೆಂದರೆ ಪ್ರಾಣಿಗಳು ಬದುಕಲು ತಿನ್ನಬೇಕು. ಆದರೆ ನಾವೇನು ಈ ಜಗದಲ್ಲಿನ ಎಲ್ಲಾ ಪ್ರಾಣಿಗಳು ತಿನ್ನುವುದನ್ನು ನಿಜವಾಗಿಯೂ ಕಂಡಿದ್ದೇವೆಯೆ? ಖಂಡಿತವಾಗಿಯೂ ಇಲ್ಲ.
ಆದರೂ ನಮ್ಮ ಸಾಮಾನ್ಯ ಜೀವಶಾಸ್ತ್ರ ಮತ್ತು ನಾವು ಕಂಡಂತೆ ಎಲ್ಲಾ ಪ್ರಾಣೀಗಳು ಬದುಕಲು ತಿನ್ನಬೇಕು ಎಂಬುದು ನಮಗೆ ತಿಳಿದಿರುವ ಸಂಗತಿ. ಹೀಗಾಗಿ inductive reasoning ಸಂಶ್ಲೇಷಣಾತ್ಮಕವಾಗಿರುತ್ತದೆ(Synthesis).
Analytical Reasoning
Analytical Reasoning ಎಂದರೆ ಕೊಟ್ಟಿರುವ ಸಂಗತಿಗಳನ್ನು ಕೂಲಂಕುಶವಾಗಿ ಪರಿಗಣಿಸಿ, ವಿಚಾರ ಮಾಡಿ ಪ್ರತೀ ವಿಚಾರವನ್ನು ಪ್ರಶ್ನಿಸಿ ಉತ್ತಮ ತೀರ್ಮಾನ ಅಥವಾ ಪರಿಹಾರವನ್ನು ಒದಗಿಸುವುದಾಗಿದೆ. ಇಲ್ಲಿ ವೈಯಕ್ತಿಕ ಅಭಿಪ್ರಾಯಗಳಲ್ಲೂ ವಿಚಾರಿಸಬಹುದು ಹಾಗಾಗಿ ಇದು ಕೆಲವೊಮ್ಮೆ ವ್ಯಕ್ತಿನಿಷ್ಠ ಸ್ವರೂಪವನ್ನು ಹೊಂದಿರುತ್ತದೆ. Analytical Reasoning ಅಲ್ಲಿ ವಾಕ್ಯಗಳು, ವಾಕ್ಯಗಳ ಗುಂಪು, ವಿಷಯಾಧಾರಿತ ಪ್ಯಾರಾದಲ್ಲಿ ಸಣ್ಣ ವಾದಗಳು, ಸಂಗತಿಗಳು, ಪ್ರಮೇಯಗಳು ಮತ್ತು ಚಿತ್ರಗಳನ್ನು ನೀಡಲಾಗುವುದು. ಮತ್ತು ಪ್ರಶ್ನೆಗಳನ್ನು ವಾದಗಳಲ್ಲಿ, ನಿರ್ಣಯಗಳಲ್ಲಿ, ಸೂಚ್ಯಂಕಗಳಲ್ಲಿ ಅಥವಾ ಸಮಾಪ್ತಿಗಳ ರೂಪದಲ್ಲಿ ಕೇಳಬಹುದು. ಈ ರೀತಿಯ ಪ್ರಶ್ನೆಗಳನ್ನು ಬಿಡಿಸಲು ಪ್ರಶ್ನೆಗಳ ಸ್ವರೂಪವನ್ನು ತಿಳಿಯುವುದು ಅವಶ್ಯಕ.
ಪ್ರಶ್ನೆಗಳ ಸ್ವರೂಪಗಳು
- Assumptions and statements ( ಊಹೆಗಳು ಮತ್ತು ಹೇಳಿಕೆಗಳು)
- Force of Argument ( ವಾದ)
- Assertion and Reasoning (ಉಲ್ಲೇಖ ಮತ್ತು ಕಾರಣ)
- Statements and Course of Action (ಹೇಳಿಕೆಗಳು ಮತ್ತು ಕ್ರಮ ಕೈಗೊಳ್ಳುವಿಕೆ)
Assumptions and Statement Analytical Reasoning
Assumptions ಎನ್ನುವುದು ಯಾರೂ ಹೇಳದ ಅಥವಾ ಅಜ್ಞಾತ ಉಲ್ಲೇಖಗಳು ಆದರೆ ಅವು ಯಾವುದಾದರೊಂದು ಪ್ರಮೇಯದ ಅಥವಾ ವಾದವನ್ನು ಸೂಚಿಸುತ್ತವೆ. ಹಾಗಾಗಿ assumption ಅನ್ನು ಸೂಚ್ಯಂಕ ಪ್ರತಿಪಾದನೆ ಎಂದು ಪರಿಗಣಿಸಬಹುದು. ಕೊಟ್ಟಿರುವ ಸಂಗತಿಗಳನ್ನು ಕೂಲಂಕುಶವಾಗಿ ಪರಿಗಣಿಸಿ, ವಿಚಾರ ಮಾಡಿ ಮಾಡುವ ವಿಚಾರದ ಬಗ್ಗೆ ಪ್ರಶ್ನೆಗಳನ್ನು ಹಾಕಿಕೊಂಡು ಉತ್ತಮ ತೀರ್ಮಾನ ಅಥವಾ ಪರಿಹಾರವನ್ನು ಒದಗಿಸುವುದಾಗಿದೆ.Assumption ಅಂದರೆ ಊಹಿಸಿದ, ಲಘುವಾಗಿ ತೆಗೆದುಕೊಳ್ಳಬಹುದಾದ ಎಂದರ್ಥ. ಹಲವಾರು ವಿಷಯಗಳನ್ನು ನಾವು ನಮ್ಮ ಜೀವನದಲ್ಲಿ ಹೇಳುವುದಿಲ್ಲ ಆದರೆ ಅವುಗಳನ್ನು ನಾವು ಲಘುವಾಗಿ ತೆಗೆದುಕೊಳ್ಳುತ್ತೇವೆ ಅವುಗಳನ್ನು assumption ಎಂದು ಹೇಳಬಹುದು. Implicit ಎಂದರೆ hidden, ಹಾಗಾಗಿ implicit assumption ಎಂದರೆ hidden assumption.
ಕೆಳಗೆ ನೀಡಲಾಗುವ ಪ್ರಶ್ನೆಗಳಲ್ಲಿ ಪ್ರತಿ ಹೇಳಿಕೆಯು num I ಮತ್ತು II ಎಂಬ assumption ಗಳನ್ನು ಹೊಂದಿವೆ. Assumption ಗಳನ್ನು ಓದಿ ಮತ್ತು ಯಾವುದು ಭಾವಿಸಲಾಗಿದೆಯೋ ಅಥವಾ ಲಘುವಾಗಿ ತೆಗೆದುಕೊಳ್ಳುವುದೋ ನಿರ್ಣಯಿಸಿ, ಯಾವ assumption implicit ಆಗಿದೆ ಎಂಬುದನ್ನು ಬರೆಯಿರಿ.
ಅ) Only assumption I is implicit
ಬ) Only assumption II is implicit
ಕ) Both I and II are implicit
ಡ) Neither I nor II are implicit
ಉದಾಹರಣೆ 1 –
Statement: A ಯೂ Bಗೆ ಹೇಳುತ್ತದೆ “ನನ್ನ ಅಭಿಪ್ರಾಯದಲ್ಲಿ ನೀನು ನಿನ್ನ ಭವಿಷ್ಯದಲ್ಲಿ ಯಶಸ್ವಿಯಾಗಲು ಪರಿಣಿತರ ಬಳಿ ತಯಾರಿಗಾಗಿ ಹೋಗುವುದು ಉತ್ತಮ”
Assumptions:
I. B ಯೂ A ಯಿಂದ ಸಲಹೆ ತೆಗೆದುಕೊಂಡಿತು.
II. ಪರಿಣಿತರು ಒಬ್ಬ ವ್ಯಕ್ತಿಯನ್ನು ಯಶಸ್ವಿಯಾಗುವಂತೆ ತರಬೇತಿ ನೀಡುವ ಸಾಮರ್ಥ್ಯವನ್ನು ಹೊಂದಿರುತ್ತಾರೆ.
ವಿವರಣೆ:
ನಾವು ನಮ್ಮ ಜೀವನದಲ್ಲಿ ಹಲವಾರು ಬಾರಿ ಜನರಿಂದ ಸಲಹೆಗಳನ್ನು ನಾವು ಕೇಳದಿದ್ದರು ಪಡೆಯುತ್ತೇವೆ ಹಾಗಾಗಿ ಇಲ್ಲಿ (I) ಮಾನ್ಯವಲ್ಲ. ಕೇವಲ (II) implicit ಆಗಿದೆ. (II) ರಲ್ಲಿ ಭಾವಿಸಲಾದ ಅಭಿಪ್ರಾಯವಿದೆ. ಅದರಿಂದಲೆ A ಯು B ಗೆ ಸಲಹೆಯನ್ನು ನೀಡಿದ್ದು. ಹಾಗಾಗಿ ಪರಿಣಿತರು ಉತ್ತಮ ತರಬೇತಿ ನೀಡುತ್ತಾರೆ ಎಂದು ಭಾವಿಸುವುದು ಸರಿಯಾಗಿದೆ.
ಉದಾಹರಣೆ 2 –
Statement: ಭಾರತದಲ್ಲಿನ ಎಲ್ಲಾ ದಿನಪತರಿಕೆಗಳಲ್ಲಿ The Hindu ದಿನಪತ್ರಿಕೆ ಹೆಚ್ಚು ಓದುಗರನ್ನು ಹೊಂದಿದೆ.
Assumptions:
I. ಭಾರತದಲ್ಲಿ ದಿನಪತ್ರಿಕೆ ಓದುವ ಓದುಗರ ಪ್ರಮಾಣ ತಿಳಿದಿದೆ
II. ಭಾರತಲ್ಲಿ The Hindu ದಿನಪತ್ರಿಕೆಯ ಹೊರತು ಯಾವ ದಿನಪತ್ರಿಕೆಯು ಹೆಚ್ಚು ಓದುಗರನ್ನು ಹೊಂದಿಲ್ಲ.
ವಿವರಣೆ:
ನಮಗೆ ಮಾಹಿತಿ ತಿಳಿದಿರುವ ಕಾರಣ ನಾವು ಭಾರತದಲ್ಲಿನ ಎಲ್ಲಾ ದಿನಪತರಿಕೆಗಳಲ್ಲಿ The Hindu ದಿನಪತ್ರಿಕೆ ಹೆಚ್ಚು ಓದುಗರನ್ನು ಹೊಂದಿದೆ ಎಂದು ಹೇಳಬಹುದು. ಹಾಗಾಗಿ (I) ಅನ್ನು ಪರಿಗಣಿಸಬಹುದು. ಆದರೆ ಬೇರೆ ಯಾವ ದಿನಪತ್ರಿಕೆಯು ಹೆಚ್ಚು ಓದುಗರನ್ನು ಹೊಂದಿಲ್ಲ ಎಂದು ನಾವು ಹೇಳಲಾಗುವುದಿಲ್ಲ. ಹಾಗಾಗಿ (II) ಬರುವುದಿಲ್ಲ.
Force Of Arguments
ವಾದಗಳೆಂದರೆ ಒಂದು ಅಥವಾ ಅನೇಕ ಪ್ರತಿಪಾದನೆಯನ್ನು ಹೊಂದಿರುತ್ತವೆ. ಅವು ನಂತರ ತೀರ್ಮಾನಗಳನ್ನು ಹೊಂದಿರುತ್ತವೆ. ಒಂದು ವಾದವನ್ನು ಮಾನ್ಯವೆಂದು ಯಾವಾಗ ಭಾವಿಸಲಾಗುವುದು ಎಂದರೆ ಯಾವಾಗ ಕೊಟ್ಟಿರುವ ಪ್ರತಿಪಾದನೆಗಳೆಲ್ಲವೂ ಸತ್ಯವಾಗಿರಬೇಕು ಅಥವಾ ಮಾನ್ಯವಾಗಿರಬೇಕು. ಎರಡಲ್ಲಿ ಯಾವುದಾದರೊಂದು ತಪ್ಪಾಗಿದ್ದರೂ ತೀರ್ಮಾನ ಮಾನ್ಯವಾಗುವುದಿಲ್ಲ. ಯಾವುದೇ ಕೊಟ್ಟಿರುವ ಪ್ರತಿಪಾದನೆಗಳು ಸತ್ಯವಿದ್ದರೆ ತೀರ್ಮಾನವು ಸತ್ಯವಾಗಿಯೇ ಇರುತ್ತದೆ.
ಉದಾಹರಣೆ-
ಪ್ರತಿಪಾದನೆ 1: ಎಲ್ಲಾ ವಿಜ್ಞಾನಿಗಳು ಮೇಧಾವಿಗಳು
ಪ್ರತಿಪಾದನೆ 2: ರಮಣ್ ಒಬ್ಬ ವಿಜ್ಞಾನಿ
ತೀರ್ಮಾನ : ಹಾಗಾಗಿ ರಮಣ್ ಮೇಧಾವಿ
ಇದು ಮಾನ್ಯವಾಗಿದೆ.
ಉದಾಹರಣೆ-
ಪ್ರತಿಪಾದನೆ 1:ಎಲ್ಲಾ ವಿಜ್ಞಾನಿಗಳು ಮೇಧಾವಿಗಳು
ಪ್ರತಿಪಾದನೆ 1:ರಮಣ್ ಒಬ್ಬ ಮೇಧಾವಿ
ತೀರ್ಮಾನ :ಹಾಗಾಗಿ ರಮಣ್ ಒಬ್ಬ ವಿಜ್ಞಾನಿ
ಇದು ಮಾನ್ಯವಾಗಿಲ್ಲ. ಯಾಕೆಂದರೆ ಇಲ್ಲಿ ಎಲ್ಲೂ ಮೇಧಾವಿಗಳೆಲ್ಲಾ ವಿಜ್ಞಾನಿಗಳು ಎಂಬ ಹೇಳಿಕೆ ಇಲ್ಲ.
Assertion And Reasoning
ಈ ಭಾಗದಲ್ಲಿ ನಾವು assertion ಮತ್ತು reasoning ಎರಡನ್ನೂ ಕೊಡಲಾಗುತ್ತದೆ. ಮೊದಲು ನಾವು assertion ಅನ್ನು ಸರಿಯಾಗಿ ಓದಬೇಕು ನಂತರ reason ಅನ್ನೂ ಸರಿಯಾಗಿ ಓದಬೇಕು. ನಂತರ ಕೊಟ್ಟಿರುವ assertion ಗೆ ನೀಡಿರುವ reason ಸರಿಯಾಗಿದೆಯೆ ಎಂಬುದನ್ನು ಗಮನಿಸಬೇಕು. ಇಲ್ಲಿ ಸಂಭವನೀಯ ಎಲ್ಲಾ ಆಯ್ಕೆಯನ್ನು ನೀಡಲಾಗುವುದು. ಈ ರೀತಿಯ ಪ್ರಶ್ನೆಗಳು ಈ ಕೆಳಗಿನ ಆಯ್ಕೆಯನ್ನು ಹೊಂದಿರುತ್ತವೆ.
ಅ) A ಸರಿಯಾಗಿದೆ. ಆದರೆ B ತಪ್ಪಾಗಿದೆ
ಬ) A ತಪ್ಪಾಗಿದೆ ಆದರೆ B ಸರಿಯಾಗಿದೆ
ಕ) A ಮತ್ತು B ಎರಡೂ ಸರಿಯಾಗಿದೆ. ಆದರೆ B ಯು Aಯ ಸರಿಯಾದ ವಿವರಣೆ ಅಲ್ಲ
ಡ) A ಮತ್ತು B ಎರಡೂ ಸರಿಯಾಗಿದೆ ಮತ್ತು Bಯು Aಯ ಸರಿಯಾದ ವಿವರಣೆಯಾಗಿದೆ
ಉದಾಹರಣೆ-
Assertion(A): ಪ್ರಮುಖ ಪುರಾತನ ನಾಗರೀಕತೆಗಳು ನದಿಯ ದಂಡೆಗಳ ಬಳಿ ಬೆಳೆದವು
Reason (R): ನದಿಗಳು ಕೃಷಿಗೆ ನೀರನ್ನು ಒದಗಿಸುತ್ತವೆ ಮತ್ತು ಸಾರಿಗೆಯ ಮಾರ್ಗವಾಗಿಯೂ ಇದೆ.
ವಿವರಣೆ:
ಇಲ್ಲಿ ನಮಗೆಲ್ಲರಿಗೂ ತಿಳಿದಿರುವ ಸಂಗತಿಯೆಂದರೆ ನಾಗರೀಕತೆಗಳು ನದಿ ದಂಡೆಯ ಬಳಿ ಬೆಳೆದವು ಎಂಬುದು ಹಾಗಾಗಿ A ಸರಿಯಾಗಿದೆ. ಮತ್ತು R ಕೂಡ ಸರಳವಾಗಿ ಸರಿಯಾಗಿದೆ ಹಾಗಾಗಿ ಇಲ್ಲಿ ಆಯ್ಕೆ (ಡ) ಸರಿಯಾದ ಉತ್ತರ.
ಉದಾಹರಣೆ-
Assertion (A): ಬುಧ ಗ್ರಹವೂ ಸೂರ್ಯನಿಂದ ಅತೀ ದೂರವಿರುವ ಗ್ರಹವಾಗಿದೆ
Reason (R): ಬುಧ ಗ್ರಹವೂ ಇಡಿ ಸೌರಮಂಡಲದಲ್ಲಿಯೆ ಅತಿ ಚಿಕ್ಕ ಗ್ರಹವಾಗಿದೆ.
ವಿವರಣೆ:
ಇಲ್ಲಿ A ತಪ್ಪಾಗಿದೆ ಏಕೆಂದರೆ ನಮಗೆಲ್ಲ ತಿಳಿದಿರುವಂತೆ ಬುಧ ಗ್ರಹವು ಸೂರ್ಯನಿಗೆ ಅತಿ ಸಮೀಪದ ಗ್ರಹವಾಗಿದೆ. R ಸರಿಯಾಗಿದೆ. ಹಾಗಾಗಿ ಇಲ್ಲಿ ಆಯ್ಕೆ ಬ) ಸರಿಯಾಗಿದೆ.
Statements And Courses Of Action
ಕ್ರಮ ಕೈಗೊಳ್ಳುವುದು ಎಂದರೆ ಸುಧಾರಣೆಗಾಗಿ ತೆಗೆದುಕೊಳ್ಳಬೇಕಾದ ಆಡಳಿತಾತ್ಮಕ ನಿರ್ಧಾರ ಅಥವಾ ಸಮಸ್ಯೆಯ ಬಗ್ಗೆ ಮುಂದುವರೆದ ಕ್ರಮವನ್ನು ಇಲ್ಲಾ ಯೋಜನೆಗಳನ್ನು ಅನುಸರಿಸುವುದು ಇತ್ಯಾದಿ ಆಗಿರುತ್ತದೆ. ಕೊಟ್ಟಿರುವ ಮಾಹಿತಿಗಳನ್ನು ಅಥವಾ ಸನ್ನಿವೇಶಗಳನ್ನು ಸತ್ಯವೆಂದು ಭಾವಿಸಿ ಅಭ್ಯರ್ಥಿಯು ಕೊಟ್ಟಿರುವ ಆಯ್ಕೆಗಳಲ್ಲಿ ಯಾವುದು ಸೂಕ್ತ ಕ್ರಮವೆಂದು ಬರೆಯಬೇಕು.
ಉದಾಹರಣೆ-
ಸನ್ನಿವೇಶ: ಕಳೆದ ಹಲವಾರು ದಿನಗಳಿಂದ ಸತತವಾಗಿ ನಿಲ್ಲದೆ ಹೊಡೆಯುತ್ತಿರುವ ಮಳೆ ಮತ್ತು ನದಿಯಲ್ಲಿರುವ ಹೂಳು ಮತ್ತು ಕೆಸರಿನ ಕಾರಣವಾಗಿ ಪ್ರಳಯದ ಸಮಸ್ಯೆಯನ್ನು ಸೃಷ್ಟಿಸಿದೆ.
ಕೈಗೊಳ್ಳಬೇಕಾದ ಕ್ರಮಗಳು:
1. ನದಿಯ ಸಮೀಪದಲ್ಲಿ ವಾಸಿಸುವ ಜನರನ್ನು ಶೀಘ್ರವಾಗಿ ಸುರಕ್ಷಿತ ಪ್ರದೇಶಕ್ಕೆ ರವಾನಿಸಬೇಕು.
2. ರೇಡಿಯೋ ಅಥವಾ ಟಿ.ವಿಯ ಮೂಲಕ ಪರಿಸ್ಥಿತಿಯ ಬಗ್ಗೆ ಜನರಿಗೆ ತಿಳಿಸಬೇಕು
3. ನದಿಯಲ್ಲಿನ ನೀರಿನ ಮಟ್ಟ ಕಡಿಮೆಯಾದ ತಕ್ಷಣ ಹೂಳು ಮತ್ತು ಕೆಸರನ್ನು ತೆಗೆಯಬೇಕು
ಅ) 1 ಮತ್ತು 2ನ್ನು ಅನುಸರಿಸಬೇಕು
ಬ) 2 ಮತ್ತು 3ನ್ನು ಅನುಸರಿಸಬೇಕು
ಕ) ಮೇಲಿನ ಯಾವುದು ಅಲ್ಲ
ಡ) ಮೇಲಿನ ಎಲ್ಲಾ
ವಿವರಣೆ:
1 ಮತ್ತು 2 ಎರಡೂ ತಕ್ಷಣವೇ ಆಗಬೇಕಾದ ಕೆಲಸ ಕಾರಣ ಅನೇಕ ಜೀವಗಳು ಅಪಾಯದಲ್ಲಿವೆ. ಹಾಗಾಗಿ ಆಯ್ಕೆ ಅ) ಸರಿಯಾಗಿದೆ.
ಉದಾಹರಣೆ-
ಸನ್ನಿವೇಶ
ಒಬ್ಬ ಪ್ರಾಮಾಣಿಕ ಶಿಕ್ಷಕನ ತರಗತಿಯಲ್ಲಿ ಎರಡರಿಂದ ಮೂರು ವಿದ್ಯಾರ್ಥಿಗಳು ಕೀಟಲೆ ಮಾಡುತ್ತಲೇ ಇರುತ್ತವೆ. ಆ ಶಿಕ್ಷಕನು ವಿದ್ಯಾರ್ಥಿಗಳ ಈ ಪ್ರವೃತ್ತಿಯಿಂದ ಬೇಸತ್ತಿದ್ದಾನೆ.
ಕ್ರಮಗಳು:
1. ಶಿಕ್ಷಕನು ವಿದ್ಯಾರ್ಥಿಗಳು ಹೀಗೆಯೆ ಕೀಟಲೆ ಮಾಡಿದಲ್ಲಿ ತರಗತಿಯನ್ನು ತೆಗೆದುಕೊಳ್ಳುವುದಿಲ್ಲವೆಂದು ಹೇಳುತ್ತಾನೆ
2. ಪೂರ್ತಿ ತರಗತಿಯನ್ನು ಗಮನದಲ್ಲಿಟ್ಟುಕೊಂಡು ಆ ವಿದ್ಯಾರ್ಥಿಗಳನ್ನು suspend ಮಾಡುತ್ತಾನೆ
3. ಶಿಕ್ಷಕನು ಆ ವಿದ್ಯಾರ್ಥಿಗಳೊಂದಿಗೆ ಮಾತನಾಡಿ ಅವರು ಈ ರೀತಿ ವರ್ತಿಸುವ ಕಾರಣ ತಿಳಿದುಕೊಂಡು ಅದರ ಬಗ್ಗೆ ಏನು ಮಾಡಬೇಕು ಎಂದು ವಿಚಾರ ಮಾಡುತ್ತಾನೆ.
4. ಅವರ ಬಗ್ಗೆ ಪ್ರಾಂಶುಪಾಲರ ಬಳಿ ದೂರು ಮಾಡಿ ಅವರ ವಿರುದ್ದ ಕಠಿಣ ಕ್ರಮ ಕೈಗೊಳ್ಳುವಂತೆ ರಿಪೋರ್ಟ್ ಮಾಡುತ್ತಾನೆ.
ವಿವರಣೆ: ಈ ಸನ್ನಿವೇಶದಲ್ಲಿ ಆಯ್ಕೆ 3 ಸರಿಯಾದ ಉತ್ತರ. ಏಕೆಂದರೆ ಇದು ತರಗತಿಯಲ್ಲಿನ ಅಶಿಸ್ತನ್ನು ನಿವಾರಿಸುವಲ್ಲಿ ದೀರ್ಘಕಾಲದ ಪರಿಹಾರ ನೀಡುತ್ತದೆ.
Conclusion
Reasoning ಎನ್ನುವುದು ಕೊಟ್ಟಿರುವ ಸಂಗತಿಗಳನ್ನು ನಾವು ಯಾವ ರೀತಿ ಅರ್ಥೈಸಿಕೊಳ್ಳುತ್ತಿವಿ ಮತ್ತು ನಮ್ಮ ತೀರ್ಮಾನ ತೆಗೆದುಕೊಳ್ಳುವ ಸಾಮರ್ಥ್ಯ ಹೇಗಿದೆ ಎಂಬುದನ್ನು ತಿಳಿಸುತ್ತದೆ. ನಾವು ಯಾವ ರೀತಿ ವಿಚಾರ ಮಾಡುತ್ತೇವೆ ಮತ್ತು ನಮ್ಮ ವೈಯಕ್ತಿಕ ಅಭಿಪ್ರಾಯಗಳು ತೀರ್ಮಾನ ತೆಗೆದುಕೊಳ್ಳಬೇಕಾದಾಗ ಮಾನ್ಯವಾಗುತ್ತವೆಯೋ ಇಲ್ಲವೋ ಎಂಬುದನ್ನು ನಾವು ಅರಿತಿರಬೇಕು. Logical Reasoning ಎನ್ನುವುದು ಕೊಟ್ಟಿರುವ ಸಂಗತಿಗಳನ್ನು ಸಾಧ್ಯವಾದಷ್ಟು ತಾರ್ಕಿಕ ರೀತಿಯಲ್ಲಿ ನೋಡುವುದು. ಇದು ಬಹಳ ಸ್ಪಷ್ಟತೆಯನ್ನು ಒಳಗೊಳ್ಳುತ್ತದೆ. Analytical Reasoning ಎನ್ನುವುದು ಕೊಟ್ಟಿರುವ ಸಂಗತಿಗಳನ್ನು ಕೂಲಂಕುಶವಾಗಿ ಪರಿಗಣಿಸಿ, ವಿಚಾರ ಮಾಡಿ ಮಾಡುವ ವಿಚಾರದ ಬಗ್ಗೆ ಪ್ರಶ್ನೆಗಳನ್ನು ಹಾಕಿಕೊಂಡು ಉತ್ತಮ ತೀರ್ಮಾನ ಅಥವಾ ಪರಿಹಾರವನ್ನು ಒದಗಿಸುವುದಾಗಿದೆ. ಸಹಜವಾಗಿಯೆ ನಮ್ಮ ಮೆದುಳು ನಮ್ಮ ಸುತ್ತಲೂ ನಡೆಯುವ ಸಂಗತಿಗಳ ಬಗ್ಗೆ ತನ್ನದೇ ಆದ ವಿವರಣೆಯನ್ನು ಹುಡುಕಲು ಮುಂದಾಗುತ್ತದೆ. ಆಗ ನಾವು ನಮಗೆ ತಿಳಿದಿರುವ ಸಂಗತಿಗಳನ್ನು ಪರಿಗಣಿಸಿ ಒಂದು ನಿರ್ಣಯಕ್ಕೆ ಬರುತ್ತೇವೆ. ಇದನ್ನಾಧರಿಸಿಯೆ reasoning ಅನ್ನುವ ವಿಷಯವು ನಮ್ಮ ಬುದ್ದಿವಂತಿಕೆಯನ್ನ ಪರೀಕ್ಷಿಸುತ್ತದೆ.
FAQs
ಉ: Logical Reasoning ಎಂದರೆ ನಿಖರವಾದ ನಿರ್ಣಯಗಳನ್ನು ತೆಗೆದುಕೊಳ್ಳಲು ಇರುವ ಸಂಗತಿಗಳಿಗೆ Logic ಅಥವಾ ಸೂಕ್ಷ್ಮ ತರ್ಕವನ್ನು ಹಾಕಿ ವಿಚಾರ ಮಾಡುವುದಾಗಿದೆ.
ಉ: ಕೂಲಂಕುಶವಾಗಿ ಕೊಟ್ಟಿರುವ ಸಂಗತಿಗಳ ಬಗ್ಗೆ ವಿಚಾರ ಮಾಡಿ, ವಿಚಾರವನ್ನು ಅಂಶಗಳಾಗಿ ವಿಂಗಡಿಸಿ ಪ್ರತಿ ಅಂಶವನ್ನು ಪ್ರಶ್ನಿಸಿ ಸರಿಯಾದ ಮತ್ತು ಉತ್ತಮ ತೀರ್ಮಾನಕ್ಕೆ ಬರುವುದಕ್ಕೆ analytical reasoning ಎನ್ನುತ್ತಾರೆ.
ಉ: ಹೌದು. KAS ಮತ್ತು PSI ಎರಡೂ ಪರೀಕ್ಷೆಯಲ್ಲಿ Paper II ಅಲ್ಲಿ logical ಮತ್ತು analytical reasoning ಮೇಲೆ ಪ್ರಶ್ನೆಗಳು ಬರುತ್ತವೆ.
Oliveboard is a learning & practice platform for premier entrance exams. We have helped over 1 crore users since 2012 with their Bank, SSC, Railways, Insurance, Teaching and other competitive Exams preparation.
Oliveboard Live Courses & Mock Test Series
- Download IRDAI Assistant Manager PYQs
- Monthly Current Affairs 2024
- Download RBI Grade B PYQ PDF
- Download IFSCA Grade A PYQs
- Download SEBI Grade A PYQs
- Attempt Free SSC CGL Mock Test 2024
- Attempt Free IBPS Mock Test 2024
- Attempt Free SSC CHSL Mock Test 2024
- Download Oliveboard App
- Follow Us on Google News for Latest Update
- Join Telegram Group for Latest Govt Jobs Update