ಕರ್ನಾಟಕ PSI ದೈಹಿಕ ಪರೀಕ್ಷೆ 2021- ಒಂದು ಅತ್ತ್ಯುತ್ತಮ ಕೈಪಿಡಿ

ಕರ್ನಾಟಕ ಪೊಲೀಸ್ ಇಲಾಖೆಯು ಪೊಲೀಸ್ ಸಬ್ ಇನ್ಸ್‌ಪೆಕ್ಟರ್‌ಗಳ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಅಭ್ಯರ್ಥಿಗಳು ಕರ್ನಾಟಕ ಪೊಲೀಸ್ SI ನೇಮಕಾತಿ 2021 ಕುರಿತು ಅವಶ್ಯಕ ವಿವರಗಳನ್ನು ಇಲ್ಲಿ ಕಾಣಬಹುದು.ಅಭ್ಯರ್ಥಿಯು ಸಹಿಷ್ಣುತೆ ಪರೀಕ್ಷೆ (Endurance Test)/ಭೌತಿಕ ಗುಣಮಟ್ಟದ ಪರೀಕ್ಷೆ (Physical Standard Test) ಮತ್ತು ಕರ್ನಾಟಕ SI ಹುದ್ದೆಗೆ ಪರಿಗಣಿಸಲಾಗುವ ಲಿಖಿತ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳಿಗೆ ET/PST ಅವಶ್ಯಕತೆಗಳು ವಿಭಿನ್ನವಾಗಿರುತ್ತದೆ. ಲಿಖಿತ ಪರೀಕ್ಷೆಯಲ್ಲಿ ಎರಡು ಪೇಪರ್‌ಗಳಿರುತ್ತವೆ :ಪೇಪರ್-I ಮತ್ತು ಪೇಪರ್-II, ಕ್ರಮವಾಗಿ 50 ಮತ್ತು 150 ಅಂಕಗಳನ್ನು ಹೊಂದಿರುತ್ತದೆ. ಪೇಪರ್-I, ವಿವರಣಾತ್ಮಕ ಶೈಲಿಯಿಂದ (Descriptive style) ಕೂಡಿದ್ದು,ಅಭ್ಯರ್ಥಿಯು ತಮ್ಮ ಇಂಗ್ಲಿಷ್ ತಿಳುವಳಿಕೆ ಮತ್ತು ಬರವಣಿಗೆ ಕೌಶಲ್ಯವನ್ನು ಪ್ರದರ್ಶಿಸಬೇಕು. ಅದೇ ರೀತಿ ಪೇಪರ್-II,ಮಾನಸಿಕ ಸಾಮರ್ಥ್ಯ (Mental Ability) ಮತ್ತು ಪ್ರಸ್ತುತ ಘಟನೆಗಳ(Current Events) ಕುರಿತು ವಸ್ತುನಿಷ್ಠ ಮಾದರಿಯ ಪ್ರಶ್ನೆಗಳನ್ನು ಒಳಗೊಂಡಿರುತ್ತದೆ. Karnataka PSI Physical Test ಬಗ್ಗೆ ತಿಳಿಯಲು ಓದುವುದನ್ನು ಮುಂದುವರಿಸಿ.

Karnataka PSI Physical Test

ಕರ್ನಾಟಕ ಪೊಲೀಸ್ ಉದ್ಯೋಗಗಳಿಗೆ ಪರಿಗಣಿತಿ ಹೊಂದಲು ಅಭ್ಯರ್ಥಿಗಳು ಎತ್ತರ, ತೂಕ ಮತ್ತು ಎದೆಯ ಗಾತ್ರದ ವಿಷಯದಲ್ಲಿ ಕನಿಷ್ಠ ದೈಹಿಕ ಮಾನದಂಡಗಳನ್ನು ಪೂರೈಸಬೇಕು. ಅಭ್ಯರ್ಥಿಗಳು ಆನ್‌ಲೈನ್ ಅರ್ಜಿಯನ್ನು ಸಲ್ಲಿಸುವ ಮೊದಲು ಕರ್ನಾಟಕ ಪೊಲೀಸ್ ದೈಹಿಕ ದಕ್ಷತೆಯ ಅನುಸಾರ ಪರೀಕ್ಷೆಗೆ ಬೇಕಾದ ಮಾನದಂಡಗಳ ಪ್ರಕಾರ ತಮ್ಮ ದೈಹಿಕ ಅರ್ಹತೆಯನ್ನು ಪರಿಶೀಲಿಸಬೇಕು. ಉದ್ದ ಜಿಗಿತ, ಓಟ, ಗುಂಡು ಎಸೆತ ಮತ್ತು ಎತ್ತರ ಜಿಗಿತದ ಭೌತಿಕ ಮಾನದಂಡಗಳನ್ನು ಕೆಳಗೆ ಉಲ್ಲೇಖಿಸಲಾಗಿದೆ.ಕರ್ನಾಟಕ ಪೊಲೀಸ್ ಆಯ್ಕೆ ಪ್ರಕ್ರಿಯೆಯಲ್ಲಿ, ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಸಹಿಷ್ಣುತೆ ಪರೀಕ್ಷೆ (Endurance Test), ಭೌತಿಕ ಗುಣಮಟ್ಟದ ಪರೀಕ್ಷೆ (Physical Standard Test) ಮತ್ತು ಪೂರ್ವಭಾವಿ ಅರ್ಹತಾ ಪರೀಕ್ಷೆ(Preliminary Eligibility Test) ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿರಬೇಕು. ಅರ್ಹತೆ ಪಡೆಯಲು, ಅಭ್ಯರ್ಥಿಯು ದೈಹಿಕವಾಗಿ ಮತ್ತು ವೈದ್ಯಕೀಯವಾಗಿ ಸದೃಢವಾಗಿರಬೇಕು.

ಶೈಕ್ಷಣಿಕ ಅರ್ಹತೆ

ಅಭ್ಯರ್ಥಿಗಳು ಪಿಯುಸಿ/ಎಚ್‌ಎಸ್‌ಸಿ, ಡಿಪ್ಲೊಮಾ/ಐಟಿಐ ಅಥವಾ ಸರ್ಕಾರದಿಂದ ಮಾನ್ಯತೆ ಪಡೆದ ಸಂಸ್ಥೆಗಳಿಂದ ತತ್ಸಮಾನ ವಿದ್ಯಾರ್ಹತೆಯನ್ನು ಹೊಂದಿರಬೇಕು.

ವಯಸ್ಸಿನ ಮಿತಿ ಮತ್ತು ಇತರೆ ಮಾನದಂಡಗಳು

ಅಭ್ಯರ್ಥಿವಯಸ್ಸಿನ ಮಿತಿ
GM ಅಭ್ಯರ್ಥಿಗಳು19-25 ವರ್ಷಗಳು
SC/ST/CAT-01, 2A, 2B, 3A, 3B19-27 ವರ್ಷಗಳು
ಪರಿಶಿಷ್ಠ ಜಾತಿ /ಪಂಗಡ  ಅಭ್ಯರ್ಥಿಗಳು19-30 ವರ್ಷಗಳು

ಪರೀಕ್ಷೆಗೆ ಬೇಕಾದ ಪ್ರಮುಖ ಭೌತಿಕ ಮಾನದಂಡಗಳು

  • ಮೊಟ್ಟ ಮೊದಲಿಗೆ,ಇಲಾಖೆಯು ಸಹಿಷ್ಣುತೆ ಪರೀಕ್ಷೆಯನ್ನು (Endurance Test) ನಡೆಸುತ್ತದೆ.
  • ಸಹಿಷ್ಣುತೆ ಪರೀಕ್ಷೆಯಲ್ಲಿ (ET) ಉತ್ತೀರ್ಣರಾದ ಅಭ್ಯರ್ಥಿಗಳು ತದ ನಂತರ ದೈಹಿಕ ಗುಣಮಟ್ಟದ ಪರೀಕ್ಷೆಯನ್ನು (PST) ಎದುರಿಸಬೇಕಾಗುತ್ತದೆ. 
  • ದೈಹಿಕ ಗುಣಮಟ್ಟದ ಪರೀಕ್ಷೆಯನ್ನು(PST) ಉತ್ತೀರ್ಣರಾದ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆಯನ್ನು ನೀಡಲಾಗುತ್ತದೆ.

ಕರ್ನಾಟಕ PSI ದೈಹಿಕ ಅರ್ಹತೆಯ ಮಾನದಂಡಗಳು

ಕಾನ್ಸ್ಟೇಬಲ್ (ಪುರುಷ)

1600 ಮೀಟರ್ ಓಟ6:30 ನಿಮಿಷಗಳು
ಉದ್ದ ಜಿಗಿತ3.80 ಮೀಟರ್ (3 ಅವಕಾಶಗಳು)
ಎತ್ತರ ಜಿಗಿತ1.20 ಮೀಟರ್ (3 ಅವಕಾಶಗಳು)
ಗುಂಡು ಎಸೆತ (7.26 ಕೆಜಿ)5.60 ಮೀಟರ್ (3 ಅವಕಾಶಗಳು)

ಮಾಜಿ ಸೈನಿಕರು ಮತ್ತು ಮಹಿಳೆಯರು

400 ಮೀಟರ್ ಓಟ2 ನಿಮಿಷಗಳು
ಉದ್ದ  ಜಿಗಿತ2.50 ಮೀಟರ್ (3 ಅವಕಾಶಗಳು)
ಎತ್ತರ ಜಿಗಿತ0.90 ಮೀಟರ್ (3 ಅವಕಾಶಗಳು)
ಗುಂಡು ಎಸೆತ (4 ಕೆಜಿ)3.75 ಮೀಟರ್ (3 ಅವಕಾಶಗಳು)

ಮೇಲಿನ ಭೌತಿಕ ಮಾನದಂಡಗಳಿಗೆ ಅರ್ಹತೆ ಪಡೆದವರು ದೈಹಿಕ ಗುಣಮಟ್ಟದ ಪರೀಕ್ಷೆಗೆ (Physical Standard Test) ಹಾಜರಾಗಬಹುದು:

ಕಾನ್ಟೇಬಲ್ (ಪುರುಷ)

ಎತ್ತರ168 ಸೆಂ.ಮೀ
ಎದೆ86 ಸೆಂ – ಸಂಪೂರ್ಣವಾಗಿ ವಿಸ್ತರಿಸಿದಾಗ (ಕನಿಷ್ಠ ವಿಸ್ತರಣೆ -5 ಸೆಂ.ಮೀ )

ಮಾಜಿ ಸೈನಿಕರು ಮತ್ತು ಮಹಿಳೆಯರು

ಎತ್ತರ157 ಸೆಂ.ಮೀ
ಎದೆಅನ್ವಯಿಸುವುದಿಲ್ಲ
ತೂಕ (ಮಹಿಳೆಯರಿಗೆ ಮಾತ್ರ)45 ಕೆ.ಜಿ

ಅಭ್ಯರ್ಥಿಗಳು ಕೆಳಗೆ ಪಟ್ಟಿ ಮಾಡಲಾದ PSI ಅರ್ಹತಾ ಪ್ರಕ್ರಿಯೆಯನ್ನು ಅನುಸರಿಸಬೇಕು

  • Physical Endurance Test
  • Physical Standard Test
  • Written Exam

ಪರೀಕ್ಷೆಗೆ ಹಾಜರುಪಡಿಸಬೇಕಾದ ಅಗತ್ಯ ದಾಖಲೆಗಳು 

  • ವೋಟರ್ ಐಡಿ
  • X ಮಾರ್ಕ್‌ಶೀಟ್
  • XII ಮಾರ್ಕ್‌ಶೀಟ್ (ಅನ್ವಯಿಸಿದರೆ)
  • ಪದವಿ ಅಂಕಪಟ್ಟಿ (ಅನ್ವಯಿಸಿದರೆ)
  • ಜನನ ಪ್ರಮಾಣಪತ್ರ
  • ಚಾಲನಾ ಪರವಾನಿಗೆ
  • ಆಧಾರ್ ಕಾರ್ಡ್
  • ಪ್ಯಾನ್ ಕಾರ್ಡ್
  • ನಿವಾಸ ಪ್ರಮಾಣಪತ್ರ
  • ಗೆಜೆಟೆಡ್ ಅಧಿಕಾರಿಯಿಂದ ಸಹಿ ಮಾಡಿದ ಪ್ರಮಾಣಪತ್ರ
  • ಪಾಸ್ಪೋರ್ಟ್ ಗಾತ್ರದ ಫೋಟೋ
  • ಸಮುದಾಯ ಪ್ರಮಾಣಪತ್ರ (ಅನ್ವಯಿಸಿದರೆ)
  • ದೈಹಿಕವಾಗಿ ಅಂಗವಿಕಲ ಪ್ರಮಾಣಪತ್ರ (ಅನ್ವಯಿಸಿದರೆ)
  • ಪಾಸ್ಪೋರ್ಟ್
  • ಪಡಿತರ ಚೀಟಿ

ಪಿಎಸ್ಐ ಪರೀಕ್ಷೆಗೆ ಸಂಭಂದಿತ ಹೆಚ್ಚಾಗಿ ಕೇಳಲಾದ ಪ್ರಶ್ನೆಗಳು:

೧. ಕರ್ನಾಟಕದಲ್ಲಿ PSI ಅಧಿಕಾರಿಯ ಸಂಬಳ ಎಷ್ಟು?

ಉತ್ತರ. ಕರ್ನಾಟಕದಲ್ಲಿ ಪಿಎಸ್ಐ ಅಧಿಕಾರಿಯ ಆರಂಭಿಕ ವೇತನ 34500ರೂ

೨. ಕರ್ನಾಟಕ PSI ಯ ಆಯ್ಕೆ ವಿಧಾನ ಏನು?

ಉತ್ತರ. ಕರ್ನಾಟಕ ಪಿಎಸ್‌ಐ ಆಯ್ಕೆ ಪ್ರಕ್ರಿಯೆಯು Physical Standard Test, Physical Measurement Exam, Physical Endurance Test, Prelims Test ಮತ್ತು Mains Test ಪರೀಕ್ಷೆಯನ್ನು ಒಳಗೊಂಡಿದೆ.

 ೩. ಕರ್ನಾಟಕ PSI ಆಯ್ಕೆ ಪ್ರಕ್ರಿಯೆಯಲ್ಲಿ ಸಂದರ್ಶನವಿದೆಯೇ?

ಉತ್ತರ. ಇಲ್ಲ, ಕರ್ನಾಟಕ ಪಿಎಸ್ಐ ಆಯ್ಕೆ ಪ್ರಕ್ರಿಯೆಯಲ್ಲಿ ಯಾವುದೇ ಸಂದರ್ಶನವಿರುವುದಿಲ್ಲ .

BANNER ads

Download 500+ Free Ebooks (Limited Offer)👇

X